Saturday, May 4, 2024
Homeಕರಾವಳಿಮಂಡೆಕೋಲು: ಮನೆಗೆ ಮರ ಬಿದ್ದು ಸಂಪೂರ್ಣ ಹಾನಿ

ಮಂಡೆಕೋಲು: ಮನೆಗೆ ಮರ ಬಿದ್ದು ಸಂಪೂರ್ಣ ಹಾನಿ

spot_img
- Advertisement -
- Advertisement -

ಮಂಡೆಕೋಲು: ಸುಳ್ಯ ತಾಲೂಕಿನ ಮಂಡೆಕೋಲು ಗ್ರಾಮದ ಮೈತಡ್ಕ ಎಂಬಲ್ಲಿ ನಿನ್ನೆ ಸಂಜೆ ರಾಜೇಶ ಪೂಜಾರಿ ಎಂಬವರ ಮನೆಗೆ ಮನೆಯ ಪಕ್ಕ ಇದ್ದ ಬೊಳ್ಪಾಲೆ ಮರವೊಂದು ಬಿದ್ದು ಮೇಲ್ಛಾವಣಿಗೆ ಸಂಪೂರ್ಣ ಹಾನಿಯಾಗಿದೆ.

ಸಂಜೆ 7 ಗಂಟೆ ಸುಮಾರಿಗೆ ಘಟನೆ ನಡೆದಿದ್ದು ಮಾಡಿನ ಹೆಂಚುಗಳು ಪುಡಿಯಾಗಿವೆ. ರೀಪುಗಳು ತುಂಡಾಗಿವೆ. ಮಳೆ ನೀರು ಅಡುಗೆ ಕೋಣೆ ಮತ್ತು ಎದುರು ಕೋಣೆಯಲ್ಲಿ ತುಂಬಿ ಹೋಗಿದೆ. ಹಾನಿಯ ಬಗ್ಗೆ ಕಂದಾಯ ಇಲಾಖೆಗೆ ಮಾಹಿತಿ ನೀಡಲಾಗಿದೆ.

- Advertisement -
spot_img

Latest News

error: Content is protected !!