Saturday, June 28, 2025
Homeತಾಜಾ ಸುದ್ದಿಪ್ರೀತಿ ನಿರಾಕರಿಸಿದ್ದಕ್ಕೆ ಮಹಿಳಾ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ ಮ್ಯಾನೇಜರ್ : ಸಿಸಿಟಿವಿಯಲ್ಲಿ ಸೆರೆಯಾಯ್ತು ಹಲ್ಲೆಯ...

ಪ್ರೀತಿ ನಿರಾಕರಿಸಿದ್ದಕ್ಕೆ ಮಹಿಳಾ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ ಮ್ಯಾನೇಜರ್ : ಸಿಸಿಟಿವಿಯಲ್ಲಿ ಸೆರೆಯಾಯ್ತು ಹಲ್ಲೆಯ ದೃಶ್ಯ

spot_img
- Advertisement -
- Advertisement -

ಬೆಂಗಳೂರು : ತನ್ನ ಪ್ರೀತಿಯನ್ನು ನಿರಾಕರಿಸಿದ ಯುವತಿಯ ಮೇಲೆ ಡಾಮಿನೋಸ್ ಪಿಜ್ಜಾ ಹಟ್ ನ ಮ್ಯಾನೇಜರ್ ಹಲ್ಲೆ ನಡೆಸಿರುವ ಘಟನೆ ಬೆಂಗಳೂರಿನ ಬಸವನಗುಡಿಯ ರಾಮಕೃಷ್ಣ ಆಶ್ರಮದ ರಸ್ತೆಯಲ್ಲಿರುವ ಪಿಜ್ಜಾ ಹಟ್ ನಲ್ಲಿ ನಡೆದಿದೆ.

ತನ್ನ ಪ್ರೀತಿಯನ್ನು ನಿರಾಕರಿಸಿದ ಯುವತಿಯ ಕಪಾಳಕ್ಕೆ ಮ್ಯಾನೇಜರ್ ಪುರುಷೋತ್ತಮ್ ಎಂಬಾತ ಹೊಡೆದಿದ್ದಾನೆ. ಇನ್ನು ಹೊಡೆತದ ರಭಸಕ್ಕೆ ಯುವತಿ ನೆಲಕ್ಕೆ ಬಿದ್ದಿದ್ದಾಳೆ. ಈ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಇನ್ನು ತನ್ನ ಮೇಲೆ ಹಲ್ಲೆಯಾದರೂ ಯುವತಿ ಕೆಲಸದಿಂದ ತೆಗೆಯುತ್ತಾರೆ ಎಂಬ ಭಯಕ್ಕೆ ದೂರು ನೀಡಿಲ್ಲ. ವಿಡಿಯೋ ವೈರಲ್ ಆಗುತ್ತಿದ್ದಂತೆ ಬಸವನಗುಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -
spot_img

Latest News

error: Content is protected !!