Saturday, November 9, 2024
Homeಇತರಅಧಿಕಾರಿಯ ಮುಖಕ್ಕೆ ಉಗಿದಿದ್ದ ಕೊರೊನ ಸೋಂಕಿತ ಕೆಲವೇ ಸಮಯದಲ್ಲಿ ಸಾವು

ಅಧಿಕಾರಿಯ ಮುಖಕ್ಕೆ ಉಗಿದಿದ್ದ ಕೊರೊನ ಸೋಂಕಿತ ಕೆಲವೇ ಸಮಯದಲ್ಲಿ ಸಾವು

spot_img
- Advertisement -
- Advertisement -

ಮನುಷ್ಯನ ಕ್ರೂರತ್ವಕ್ಕೆ ಫಲ ಸಿಗಲು ಹೆಚ್ಚಿನ ಸಮಯ ಬೇಕಿಲ್ಲ ಎನ್ನುವುದಕ್ಕೆ ಈ ಸುದ್ದಿಯೇ ಸಾಕ್ಷಿ. ಪಾಕಿಸ್ತಾನ ಮೂಲದ ಅನಾನ್​ ಸಾಹೋಹ್ (56) ಎಂಬ ವ್ಯಕ್ತಿ ಥಾಯ್ಲೆಂಡ್​ನಲ್ಲಿ ​ರೈಲು ಟಿಕೆಟ್​ ಕೊಳ್ಳಲು ಕ್ಯೂನಲ್ಲಿ ನಿಂತಿದ್ದ ವೇಳೆ ವ್ಯಕ್ತಿಯೊಬ್ಬನ ಮುಖಕ್ಕೆ ಉಗಿದಿದ್ದ ಈತ, ಕೆಲವೇ ಕ್ಷಣಗಳಲ್ಲಿ ರೈಲಿನಲ್ಲಿ ಶವವಾಗಿ ಪತ್ತೆಯಾಗಿರುವ ಘಟನೆ ನಡೆದಿದೆ.

ಎರಡು ದಿನಗಳ ಹಿಂದೆ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ವಿಪರೀತ ಕೆಮ್ಮು ಮತ್ತು ವಾಂತಿ ಮಾಡಿಕೊಂಡು ಕುಸಿದುಬಿದ್ದು ಸಾವಿಗೀಡಾಗಿದ್ದಾನೆ. ಈ ಬಗ್ಗೆ ತನಿಖೆ ಆರಂಭಿಸಿದ ರೈಲ್ವೆ ಪೊಲೀಸರಿಗೆ ಶಾಕ್ ಕಾದಿತ್ತು. ರೈಲ್ವೆ ಟಿಕೆಟ್​ ಖರೀದಿ ಮಾಡುತ್ತಿದ್ದ ಸಹ ಪ್ರಯಾಣಿಕನ ಮುಖಕ್ಕೆ ಅನಾನ್​ ಉಗಿದಿರುವುದು ಬ್ಯಾಂಕಾಕ್​ನ ರೈಲ್ವೆ ನಿಲ್ದಾಣದಲ್ಲಿರುವ ಸಿಸಿಟಿವಿ ದೃಶ್ಯಾವಳಿಯಲ್ಲಿ ಪತ್ತೆಯಾಗಿದೆ. ಇದೀಗ ಅಧಿಕಾರಿಗಳು ಉಗಿಸಿಕೊಂಡ ವ್ಯಕ್ತಿಯ ಪತ್ತೆಗೆ ಮುಂದಾಗಿದ್ದು, ಆತನಿಂದ ಮತ್ತಷ್ಟು ವ್ಯಕ್ತಿಗೆ ಸೋಂಕು ಹರಡದಂತೆ ತಡೆಯಲು ಹರಸಾಹಸ ಪಡುತ್ತಿದ್ದಾರೆ.

ಅನಾನ್​ ಇತ್ತೀಚೆಗಷ್ಟೇ ಪಾಕಿಸ್ತಾನದಿಂದ ಹಿಂತಿರುಗಿ ಬ್ಯಾಂಕಾಕ್​ನಿಂದ ನಾರತಿವತ್​ಗೆ ಪ್ರಯಾಣ ಬೆಳೆಸಿದ್ದ. ಬ್ಯಾಂಕಾಕ್​ನ ಬ್ಯಾಂಗ್​ ಸ್ಯೂ ನಿಲ್ದಾಣದಲ್ಲಿ ಅಪರಿಚಿತ ಪ್ರಯಾಣಿಕನೊಬ್ಬನಿಗೆ ಈತ​ ಉಗಿದಿದ್ದ. ಬಳಿಕ ರೈಲಿನಲ್ಲೇ ಶವವಾಗಿ ಪತ್ತೆಯಾಗಿದ್ದಾನೆ. ಬಳಿಕ ಆರೋಗ್ಯ ಅಧಿಕಾರಿಗಳು ಆತನ ಶವಪರೀಕ್ಷೆ ನಡೆಸಿದಾಗ ಆತನಲ್ಲಿ ಕೋವಿಡ್​-19 ಪಾಸಿಟಿವ್​ ಇದ್ದಿದ್ದು ಖಚಿತವಾಗಿದೆ. ಅಲ್ಲದೆ, ಆತ ಮಧುಮೇಹ ಕಾಯಿಲೆಯನ್ನು ಸಹ ಹೊಂದಿದ್ದ. ಅನಾನ್​ ಸಾವಿನಿಂದ ಥಾಯ್ಲೆಂಡ್​ ಕಂಗಾಲಾಗಿದೆ.

- Advertisement -
spot_img

Latest News

error: Content is protected !!