Friday, June 5, 2026
Homeಕರಾವಳಿಪುತ್ತೂರು: ಆತ್ಮಹತ್ಯೆಗೆ ಯತ್ನಿಸಿ ಯುವಕ ಸಾವನ್ನಪ್ಪಿದ ಪ್ರಕರಣ; 8 ಮಂದಿಯ ವಿರುದ್ಧ ಪ್ರಕರಣ ದಾಖಲು

ಪುತ್ತೂರು: ಆತ್ಮಹತ್ಯೆಗೆ ಯತ್ನಿಸಿ ಯುವಕ ಸಾವನ್ನಪ್ಪಿದ ಪ್ರಕರಣ; 8 ಮಂದಿಯ ವಿರುದ್ಧ ಪ್ರಕರಣ ದಾಖಲು

- Advertisement -
- Advertisement -

ಪುತ್ತೂರಿನ ಕಟ್ಟತ್ತಾರಿನಲ್ಲಿ ಆತ್ಮಹತ್ಯೆಗೆ ಯತ್ನಿಸಿ ಯುವಕ ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ  8 ಮಂದಿಯ ವಿರುದ್ಧ ಪ್ರಕರಣ ದಾಖಲಾಗಿದೆ.

ಮೃತ ಯುವಕ ಅಬ್ದುಲ್ ನಾಸೀರ್ ರವರ ತಾಯಿ ನೆಬಿಸಾ ಅವರು ತನ್ನ ಮಗ ಆತ್ಮಹತ್ಯೆ ಮಾಡಿಕೊಳ್ಳಲು ಆರೋಪಿಗಳಾದ ಸುಮಯ್ಯ, ಅದ್ರಾಮ, ಮೊಯ್ದು, ತಾಜು, ಅಬ್ದುಲ್ಲ, ಸಮೀರ್, ನೌಫಲ್, ಅತ್ತಾವುಲ್ಲಾ ಎಂಬವರು ಕಾರಣ ಎಂದು ದೂರು ನೀಡಿದ್ದಾರೆ.ಆತ್ಮಹತ್ಯೆಗೆ ಯತ್ನಿಸುವ ಮುನ್ನ ‘ನಾನು ಬೆಳ್ಳಾರೆ ಸಮೀಪದ ಅದ್ರಾಮ ಎಂಬವರ ಮನೆಯಲ್ಲಿ ಕಾರು ಚಾಲಕನಾಗಿದ್ದು, ಅದ್ರಾಮ ಮತ್ತು ಕುಟುಂಬದವರು ಸೇರಿ ನನ್ನನ್ನು ಮನೆಗೆ ಕರೆದುಕೊಂಡು ಹೋಗಿ ನನಗೆ ಹೊಡೆದಿದ್ದಾರೆ’ ಎಂದು ಆರೋಪಿಸಿ ನಾಸಿರ್ ವಿಡಿಯೋ ರೆಕಾರ್ಡ್ ಮಾಡಿದ್ದು, ಇದರಿಂದ ಮನನೊಂದ ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದಿದ್ದರು.

ಬಳಿಕ ನಾಸಿರ್ ಅವರು ಪುತ್ತೂರು ರೈಲ್ವೇ ಸ್ಟೇಷನ್ ಬಳಿ ವಿಷ ಸೇವಿಸಿದ್ದರು.  ಆ ಬಳಿಕ ಅವರನ್ನು ಯಾರೋ ಆಸ್ಪತ್ರೆಗೆ ದಾಖಲಿಸಿದ್ದಾರೆ.ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದರು.

- Advertisement -

Latest News

error: Content is protected !!