- Advertisement -
- Advertisement -
ಬಂಟ್ವಾಳ: ಸ್ಕೂಟರ್ ಗೆ ಕಾರು ಡಿಕ್ಕಿ, ಸ್ಕೂಟರ್ ಸವಾರನಿಗೆ ಗಂಭೀರ ಗಾಯಗಳಾಗಿರುವ ಘಟನೆ ಮಣಿಹಳ್ಳ-ಮಾವಿನಕಟ್ಟೆ ರಸ್ತೆಯ ಮಣಿನಾಲ್ಕೂರು ಗ್ರಾಮದ ಎರ್ಮಳದಲ್ಲಿ ನಡೆದಿದೆ.
ಸರಪಾಡಿ ಕಲ್ಕೊಟ್ಟೆ ನಿವಾಸಿ ಸುಂದರ ಬಾಬು ಶೆಟ್ಟಿ ಗಾಯಗೊಂಡ ಸವಾರ. ಅವರು ರಾತ್ರಿ 9-50ರ ಸುಮಾರಿಗೆ ಪೆರಿಯಪಾದೆ ದೈವಸ್ಥಾನಕ್ಕೆ ಹೋಗಿ ಹರಿಕೆ ಸಲ್ಲಿಸಿ ವಾಪಸ್ಸು ತನ್ನ ಮನೆಗೆ ಸರಪಾಡಿ ಕಡೆಗೆ ತೆರಳುತ್ತಿದ್ದಾಗ ಕಾರು ಚಾಲಕನಾದ ದಿನಕರ ಅವರು ಅಜಾಗರೂಕತೆಯಿಂದ ಕಾರನ್ನು ಚಲಾಯಿಸಿಕೊಂಡು ರಸ್ತೆಯ ತೀರ ಬಲ ಬದಿಗೆ ಬಂದು ಸುಂದರ ಅವರ ಸ್ಕೂಟರಿಗೆ ಡಿಕ್ಕಿಯಾಗಿದ್ದಾರೆ. ಪರಿಣಾಮ ಸುಂದರ ಅವರುರು ಸ್ಕೂಟರ್ ಸಮೇತ ರಸ್ತೆಗೆ ಎಸೆಯಲ್ಪಟ್ಟು ಗಾಯಗೊಂಡಿದ್ದಾರೆ.
ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಕಾರು ಚಾಲಕ ದಿನಕರ ವಿರುದ್ಧ ಬಂಟ್ವಾಳ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
- Advertisement -