Thursday, June 4, 2026
Homeತಾಜಾ ಸುದ್ದಿವೃತಿಯಲ್ಲಿ ಎಂಜಿನಿಯರ್ ಆದ್ರೂ ನಾಲ್ಕೈದು ವರ್ಷ ಹುಡುಕಿದ್ರೂ ಸಿಗದ ವಧು; ರೋಸಿ ಹೋದ ಯುವಕ ಕೊನೆಗೆ...

ವೃತಿಯಲ್ಲಿ ಎಂಜಿನಿಯರ್ ಆದ್ರೂ ನಾಲ್ಕೈದು ವರ್ಷ ಹುಡುಕಿದ್ರೂ ಸಿಗದ ವಧು; ರೋಸಿ ಹೋದ ಯುವಕ ಕೊನೆಗೆ ಮಾಡಿದ್ದೇನು?

- Advertisement -
- Advertisement -

ತಮಿಳುನಾಡು; ವೃತಿಯಲ್ಲಿ ಎಂಜಿನಿಯರ್ ಆದ್ರೂ ನಾಲ್ಕೈದು ವರ್ಷ ಹುಡುಕಿದ್ರೂ ಹುಡುಗಿ ಸಿಗದೆ ರೋಸಿ ಹೋದ ಯುವಕನೊಬ್ಬ ಕೊನೆಗೆ ಊರಿಡೀ ಪೋಸ್ಟರ್ ಜಾಹೀರಾತು ಹಾಕಿ ಸುದ್ದಿಯಾಗಿದ್ದಾನೆ.

ಎಂ.ಎಸ್ ಜಗನ್‌ ಎಂಬವರ ಮ್ಯಾಟ್ರಿಮೋನಿಯಲ್ ಸೈಟ್‌ಗಳಲ್ಲಿನ ಮ್ಯಾಟ್ರಿಮೋನಿಯಲ್ ಜಾಹೀರಾತುಗಳು ಎಲ್ಲೆಡೆ ವೈರಲ್ ಆಗಿವೆ. ಇವರು ಊರಲ್ಲಿ ಎಲ್ಲೆಡೆ ಹೆಣ್ಣು ಬೇಕೆಂಬ ಪೋಸ್ಟ್‌ನ್ನು ಲಗತ್ತಿಸಿದ್ದಾರೆ. ಜಾಹೀರಾತಿನಲ್ಲಿ ಹೆಸರು, ವೇತನ, ಉದ್ಯೋಗ, ಜಾತಿ , ಆಸ್ತಿ ಸೇರಿ ವಿವಿಧ ಮಾಹಿತಿಗಳನ್ನು ಹಾಕಿದ್ದಾರೆ.

ಹಲವಾರು ವರ್ಷಗಳಿಂದ ಸೂಕ್ತ ಸಂಗಾತಿಯನ್ನು ಹುಡುಕುತ್ತಿರುವ ಜಗನ್‌ ಈ ರೀತಿ ಊರಿಡೀ ಪೋಸ್ಟರ್ ಅಂಟಿಸಿ‌ ಸುದ್ದಿಯಾಗಿದ್ದಾ‌ನೆ.

- Advertisement -

Latest News

error: Content is protected !!