Saturday, May 11, 2024
Homeಕರಾವಳಿಬಂಟ್ವಾಳ ತಾಲೂಕಿನ ವೀರಕಂಭದಲ್ಲಿ ಮನೆಗೊಂದು ಮರ ವಿಶೇಷ ಕಾರ್ಯಕ್ರಮ

ಬಂಟ್ವಾಳ ತಾಲೂಕಿನ ವೀರಕಂಭದಲ್ಲಿ ಮನೆಗೊಂದು ಮರ ವಿಶೇಷ ಕಾರ್ಯಕ್ರಮ

spot_img
- Advertisement -
- Advertisement -
ಬಂಟ್ವಾಳ: ಅರಣ್ಯ ದೇಶದ ಸಂಪತ್ತು ದೇಶವು ಆರೊಗ್ಯ ಯುತವಾಗಿ ಬೆಳೆಯುವಲ್ಲಿ ಅರಣ್ಯ ಗಳು ಬಹುಮುಖ್ಯವಾದ ಪಾತ್ರಹಿಸುತ್ತವೆ, ಒಂದು ಗಿಡವನ್ನು ಬೆಳೆಯುವ ವರೆಗೆ ನೋಡಿಕೊಂಡರೆ ಸಾಕು ಆಮೇಲೆ ಆ ಮರವೇ ನಮ್ಮನ್ನು ಬೆಳೆಸುತ್ತದೆ ಆರೋಗ್ಯಪೂರ್ಣ ಮಾಲಿನ್ಯರಹಿತ ಜೀವನ ಪಡೆಯಲು ಮರಗಳೇ ಮುಖ್ಯ ಸಾಧನವಾಗಿದೆ ಎಂದು ಅರಣ್ಯ ಸಂರಕ್ಷಣಾಧಿಕಾರಿ ಯವರಾದ ಶ್ರೀ ಶೋಭಿತ್ ರವರು ದ.ಕ.ಜಿ.ಪಂ.ಹಿ.ಪ್ರಾ.ಶಾಲೆ ಮಜಿ ವೀರಕಂಭದಲ್ಲಿ ಅರಣ್ಯ ಇಲಾಖೆ ಹಾಗೂ ಮಜಿ ಶಾಲೆಯ ಜಂಟಿ ಆಶ್ರಯದಲ್ಲಿ ನಡೆದ ಮನೆಗೊಂದು ಮರ ವಿಶೇಷ ಕಾಯ೯ಕ್ರಮ ವನ್ನು ಉದ್ಷಾಟಿಸಿ ಮಾತನಾಡಿದರು.


ಶಾಲಾದಿನಗಳಲ್ಲಿ ಪರಿಸರದ ಕಾಳಜಿ ಬೆಳೆಸಿದಾಗ ಪರಿಸರ ಪ್ರಜ್ಞೆಯೂ ಬೆಳೆಯುತ್ತದೆ ಒಂದು ಮಗು ತನ್ನ ಪರಿಸರದ ಬಗ್ಗೆ ಪ್ರೀತಿಯನ್ನು ಬೆಳೆಸಿಕೊಂಡಾಗ ಮಾತ್ರ ಅದರ ಬಗ್ಗೆ ನಿಜವಾದ ಕಲಿಕೆ ಪಡೆಯಲು ಸಾಧ್ಯ ಎಂದು ವೀರಕಂಭ ಗ್ರಾಮ ಅರಣ್ಯ ವಲಯಸಮಿತಿಯ ಅಧ್ಯಕ್ಷರಾದ ಶ್ರೀಯುತ ವಿಶ್ವನಾಥ್ ರವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ವೇದಿಕೆಯಲ್ಲಿ ವೀರಕಂಭ ವಲಯ ಅರಣ್ಯಸಮಿತಿಯ ಸದಸ್ಯರಾದ ನೋಣಯ್ಯ , ಹಿರಿಯ ವಿಧ್ಯಾಥಿ೯ ಸಂಘದ ಅಧ್ಯಕ್ಷರಾದ ರಮೇಶ್ ಗೌಡ ಮೈರ, ಶಾಲಾನಾಯಕಿ ಮಾನಸರವರು ಉಪಸ್ಥಿತರಿದ್ದರು.


ಕಾರ್ಯಕ್ರಮದ ಬಳಿಕ ಶಾಲಾ ಆವರಣದಲ್ಲಿ ಕಹಿಬೇವಿನ ಗಿಡವನ್ನು ನೆಟ್ಟು ಎಲ್ಲಾ ಮಕ್ಕಳಿಗೆ ಶ್ರೀಗಂಧ, ಬಿಲ್ವಪತ್ರೆ, ಕಹಿಬೇವು, ರಕ್ತಚಂದನ, ಮುಂತಾದ ಗಿಡಗಳನ್ನು ವಿತರಿಸಿ ಪ್ರತಿಮಗುವೂ ತನ್ನ ಪೋಷಕರ ಸಹಾಯದಿಂದ ಗಿಡವನ್ನು ಬೆಳೆಸಿ ಆರು ತಿಂಗಳ ನಂತರ ಅದರ ಬೆಳವಣಿಗೆಯ ಜವಾಬ್ಧಾರಿಯನ್ನು ತೆಗೆದುಕೊಂಡು ಉತ್ತಮ ಫಲಿತಾಂಶ ಹೊಂದಿದ ಮಗುವಿಗೆ ಬಹುಮಾನ ನೀಡುವುದನ್ನೂ ತಿಳಿಸಲಾಯಿತು .


ಮುಖ್ಯ ಶಿಕ್ಷಕ ನಾರಾಯಣ ಪೂಜಾರಿಯವರು ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿ, ಶಿಕ್ಷಕಿ ಮೀನಾಕ್ಷಿಯವರು ವಂದಿಸಿ ಶಿಕ್ಷಕಿ ಸಂಗೀತಶಮ೯ರವರು ಕಾಯ೯ಕ್ರಮ ನಿರೂಪಿಸಿದರು.

- Advertisement -
spot_img

Latest News

error: Content is protected !!