Saturday, June 27, 2026
Homeಕರಾವಳಿವಿಟ್ಲ : ಸಲಿಂಗಕಾಮಕ್ಕೆ ಯುವಕನ ಕೊಲೆ; ಗುಡ್ಡದಲ್ಲಿ ಪೆಟ್ರೋಲ್ ಸುರಿದು ಕೊಲೆ ,ಆರೋಪಿ ಬಂಧನ

ವಿಟ್ಲ : ಸಲಿಂಗಕಾಮಕ್ಕೆ ಯುವಕನ ಕೊಲೆ; ಗುಡ್ಡದಲ್ಲಿ ಪೆಟ್ರೋಲ್ ಸುರಿದು ಕೊಲೆ ,ಆರೋಪಿ ಬಂಧನ

- Advertisement -
- Advertisement -

ವಿಟ್ಲ: ಪೆಟ್ರೋಲ್ ಸುರಿದು ಯುವಕನನ್ನು ಕೊಲೆ ಮಾಡಿದ್ದೇನೆ ಎಂದು ಹೇಳಿದ್ದ ವ್ಯಕ್ತಿಯೋರ್ವನನ್ನು ವಿಟ್ಲ ಪೋಲೀಸರು ಬಂಧಿಸಿದ್ದು ವಿಚಾರಣೆ ನಡೆಸಿದಾಗ ಕೊಲೆ ಮಾಹಿತಿ ಲಭ್ಯವಾಗಿದೆ.

ಭಾನುವಾರ ರಾತ್ರಿ ಯುವಕನೋರ್ವನನ್ನು ಕಿಡ್ನಾಪ್ ಮಾಡಿ ಬಳಿಕ ಕೊಲೆ ಮಾಡಲಾಗಿದೆ ಎಂಬ ಸುದ್ದಿ ಸೋಮವಾರ ಬೆಳಿಗ್ಗೆ ಯಿಂದ ಹರಡಿತ್ತು. ಇದು ವದಂತಿಯೋ ಅಥವಾ ಸತ್ಯ ವಿಚಾರ ವೋ ಎಂದು ಗೊತ್ತಿಲ್ಲದೆ ಪೋಲೀಸರು ಸೋಮವಾರ ಬೆಳಿಗ್ಗೆಯಿಂದ ತಲೆಕೆಡಿಸಿಕೊಂಡಿದ್ದರು. ಆದರೆ ಈ ಬಗ್ಗೆ ಕೋಣಾಜೆ ಪೋಲಿಸರು, ವಿಟ್ಲ ಪೋಲೀಸರು ಹಾಗೂ ಬಂಟ್ವಾಳ ಗ್ರಾಮಾಂತರ ಪೋಲೀಸರು ತಲೆಕೆಡಿಸಿಕೊಂಡಿದ್ದು, ಹೇಳಿಕೆ ನೀಡಿದ ವ್ಯಕ್ತಿಗಾಗಿ ಬಲೆ ಬೀಸಿದ್ದರು.

ಕೊನೆಗೂ ಕೊಲೆ ಮಾಡಿದ್ದೇನೆ ಎಂದು ಹೇಳಿದ್ದ ವ್ಯಕ್ತಿ ಬೋಳಂತರು ನಿವಾಸಿ ಅದ್ದು @ ಅದ್ರಾಮ ಎಂಬಾತನನ್ನು  ವಿಟ್ಲ ಪೋಲೀಸರು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸಿದ್ದಾಗ ಸಲಿಂಗಕಾಮಕ್ಕಾಗಿ ಕೊಲೆ ಪ್ರಕರಣ ಬೆಳಕಿಗೆ ಬಂದಿದೆ ಎನ್ನಲಾಗಿದೆ.

ಬೊಳಂತರು ನಿವಾಸಿ ಆಟೋ ಚಾಲಕ ಅದ್ದು ಯಾನೆ ಅದ್ರಾಮ ಎಂದು ಹೇಳಲಾಗುತ್ತಿದ್ದು ಆತನನ್ನು ಪೋಲೀಸರು ವಶಕ್ಕೆ ಪಡೆದುಕೊಂಡು ಬಳಿಕ ವಿಚಾರಣೆಯ ವೇಳೆ ಆತ ಕೊಲೆ ಮಾಡಿದ ಬಗ್ಗೆ ತಪ್ಪೊಪ್ಪಿಕೊಂಡಿದ್ದಾನೆ ಎಂಬ ಮಾಹಿತಿ ಲಭ್ಯವಾಗಿದೆ.

ಕಳೆದ ಎರಡು ದಿನಗಳಿಂದ ಬೊಳಂತೂರು ನಿವಾಸಿ ಸಮದ್(19) ನಾಪತ್ತೆಯಾಗಿದ್ದಾನೆ ಎಂಬ ದೂರು ಕೇಳಿ ಬಂದಿದ್ದು, ಅ ಯುವಕನನ್ನೇ ಕೊಲೆ ಮಾಡಲಾಗಿದೆಯಾ ಎಂಬುದು ಇನ್ನಷ್ಟೇ ತಿಳಿಯಬೇಕಾಗಿದೆ‌.

ಇರಾ ಸೈಟ್ ನಲ್ಲಿ ಕೊಲೆ ಮಾಡಲಾಗಿದೆ ‌ಎಂಬ ವದಂತಿಗಳು ಹಬ್ಬಿ ದ್ದು ಪೋಲೀಸರು ಆತನನ್ನು ಸ್ಥಳಕ್ಕೆ ಕರೆದುಕೊಂಡು ಬಂದಾಗ ಪೆಟ್ರೋಲ್ ಸುರಿದು ಕೊಲೆ ಮಾಡಿರುವುದನ್ನು ತೋರಿಸಿದ್ದಾನೆ. ಇನ್ನೂ ಯುವಕನ ಮೃತದೇಹ  ಸುಟ್ಟುಕರಕಲಾಗಿದೆ‌‌‌. ಸಲಿಂಗಕಾಮಕ್ಕಾಗಿ ಕೊಲೆ ಮಾಡಲಾಗಿದೆ ಎಂಬ ಮಾಹಿತಿ ಕೇಳಿ ಬರುತ್ತಿದ್ದು ತನಿಖೆಯ ಬಳಿಕ ಯಾವ ಕಾರಣಕ್ಕೆ ನಡೆಸಲಾಗಿದೆ‌ ಎಂಬುವುದನ್ನು ಪೊಲೀಸರು ತನಿಖೆ ನಡೆಸುತ್ತಿದ್ದಾರೆ

- Advertisement -

Latest News

error: Content is protected !!