Tuesday, July 8, 2025
Homeಕರಾವಳಿಸುಳ್ಯ:ಮೂರು ತಿಂಗಳಿಂದ ಅಣ್ಣ ನಾಪತ್ತೆ: ಸಹೋದರನನ್ನು ಹುಡುಕಿಕೊಂಡುವಂತೆ ಪೊಲೀಸ್ ಠಾಣೆ ಮೆಟ್ಟಿಲೇರಿದ ತಮ್ಮ

ಸುಳ್ಯ:ಮೂರು ತಿಂಗಳಿಂದ ಅಣ್ಣ ನಾಪತ್ತೆ: ಸಹೋದರನನ್ನು ಹುಡುಕಿಕೊಂಡುವಂತೆ ಪೊಲೀಸ್ ಠಾಣೆ ಮೆಟ್ಟಿಲೇರಿದ ತಮ್ಮ

spot_img
- Advertisement -
- Advertisement -

ಸುಳ್ಯ: ಮೂರು ತಿಂಗಳಿಂದ ನಾಪತ್ತೆಯಾಗಿರುವ ತನ್ನ ಅಣ್ಣನನ್ನು ಹುಡುಕಿಕೊಡಿ ಎಂದು ಸುಳ್ಯದಲ್ಲಿ ವ್ಯಕ್ತಿಯೊಬ್ಬರು ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.

ಉಬರಡ್ಕ ನಿವಾಸಿಯಾಗಿರುವ ಪ್ರವೀಣ್ ಕ್ರಾಸ್ತಾ ಎಂಬವರು ನನ್ನ ಸಹೋದರ ನವೀನ್ ಕ್ರಾಸ್ತಾ ಮೂರು ತಿಂಗಳಿಂದ ನಾಪತ್ತೆಯಾಗಿದ್ದಾರೆ ಎಂದು ನೀಡಿದ್ದಾರೆ. ಮಾರ್ಚ್ 3 ರಂದು ರಾತ್ರಿ ಊಟ ಮಾಡಿ ಮಲಗಿದ್ದರು. ಮಾರ್ಚ್ 4 ರಂದು ಬೆಳಗ್ಗೆ ಎಂದು ನೋಡಿದಾಗ ನಾಪತ್ತೆಯಾಗಿದ್ದಾರೆ.ಕುಡಿತದ ಚಟವಿದ್ದ ನವೀನ್ ಇದೇ ರೀತಿ ಈ ಹಿಂದೆ ಹಲವು ಬಾರಿ ಮನೆ ಬಿಟ್ಟು ಹೋಗಿ ಸ್ವಲ್ಪ ದಿನಗಳ ನಂತರ ಮನೆಗೆ ವಾಪಾಸ್ ಬಂದಿದ್ದರು. ಹಾಗಾಗಿ ಮನೆಯವರು ದೂರು ನೀಡಿರಲಿಲ್ಲ.ಆದರೆ ಈಗ ಮೂರು ತಿಂಗಳು ಕಳೆದರೂ ನವೀನ್ ಕ್ರಾಸ್ತಾ ಅವರು ಬಾರದೇ ಇರುವುದರಿಂದ ಅವರ ಸಹೋದರ ದೂರು ದಾಖಲಿಸಿದ್ದಾರೆ.

- Advertisement -
spot_img

Latest News

error: Content is protected !!