- Advertisement -
![]()
- Advertisement -
ಸುಬ್ರಹ್ಮಣ್ಯ: ಗಾರೆ ಕೆಲಸಕ್ಕೆಂದು ಹೋದ ವ್ಯಕ್ತಿ ಮನೆಗೆ ಬಾರದೇ ನಾಪತ್ತೆಯಾಗಿರುವ ಘಟನೆ ಬಳ್ಪ ಗ್ರಾಮದಲ್ಲಿ ನಡೆದಿದೆ. ಸುಬ್ಬಪ್ಪ ಗೌಡ ಎಂಬವರ ಪುತ್ರ ಚನ್ನಕೇಶವ ಜೋಗಿ ಮನೆ (61) ನಾಪತ್ತೆಯಾದವರು. ಈ ಬಗ್ಗೆ ಸುಬ್ರಹ್ಮಣ್ಯ ಠಾಣೆಯಲ್ಲಿ ದೂರು ದಾಖಲಾಗಿದೆ.
ಚನ್ನಕೇಶವ ಅವರು ಗಾರೆ ಕೆಲಸಕ್ಕೆಂದು ಹೋಗುತ್ತೆನೆಂದು ಹೇಳಿ ಹೋದವರು ಮತ್ತೆ ಮನೆಗೆ ಬಂದಿಲ್ಲ ಎಂದು ಮನೆಯವರು ಸುಬ್ರಹ್ಮಣ್ಯ ಠಾಣೆಗೆ ದೂರು ನೀಡಿದ್ದಾರೆ.ಇವರು ಪತ್ತೆಯಾದಲ್ಲಿ ಸುಬ್ರಹ್ಮಣ್ಯ ಠಾಣೆಗೆ ತಿಳಿಸುವಂತೆ ಕೋರಲಾಗಿದೆ.
- Advertisement -


