Wednesday, May 8, 2024
Homeಕರಾವಳಿಮಂಗಳೂರು; ಪಾರ್ಟ್ ಟೈಂ ಕೆಲಸದ ಆಸೆಗೆ ಬರೋಬ್ಬರಿ 10.88 ಲಕ್ಷ ರೂಪಾಯಿ ಕಳೆದುಕೊಂಡ ಯುವಕ

ಮಂಗಳೂರು; ಪಾರ್ಟ್ ಟೈಂ ಕೆಲಸದ ಆಸೆಗೆ ಬರೋಬ್ಬರಿ 10.88 ಲಕ್ಷ ರೂಪಾಯಿ ಕಳೆದುಕೊಂಡ ಯುವಕ

spot_img
- Advertisement -
- Advertisement -

ಮಂಗಳೂರು: ಆನ್ ಲೈನ್ ನಲ್ಲಿ  ಪಾರ್ಟ್ ಟೈಂ ಕೆಲಸದ ಆಸೆಯಿಂದ ಯುವಕನೊಬ್ಬ ಬರೋಬ್ಬರಿ 10.88 ಲಕ್ಷ ರೂಪಾಯಿ ಕಳೆದುಕೊಂಡಿದ್ದಾನೆ.ಈ ಬಗ್ಗೆ ಮಂಗಳೂರಿನ ಸೆನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


ಅಕ್ಯುಯೇಟ್ ಮೀಡಿಯಾ ಕಂಪೆನಿಯ ಪ್ರತಿನಿಧಿಯೆಂದು ಪರಿಚಯಿಸಿಕೊಂಡ ಅಪರಿಚಿತ ವ್ಯಕ್ತಿ ಯುವಕನೊಬ್ಬನಿಗೆ ಆಗಸ್ಟ್ 26ರಂದು ವಾಟ್ಸಾಪ್ ಸಂದೇಶ ಕಳುಹಿಸಿದ್ದ. ಬಳಿಕ ಆನ್‌ಲೈನ್‌ನಲ್ಲಿ ಟಾಸ್ಕ್ ಗಳ ಮೂಲಕ ದಿನನಿತ್ಯವೂ 2-3 ಸಾವಿರ ರೂ. ಸಂಪಾದನೆ ಮಾಡಬಹುದು ಎಂದು ಸಂದೇಶ ರವಾನಿಸಿದ್ದಾನೆ. ಇದನ್ನು ನಂಬಿದ ದೂರುದಾರರು ಆತ ಹೇಳಿದಂತೆ ಹಂತ ಹಂತವಾಗಿ ಹಣವನ್ನು ಹೂಡಿಕೆ ಮಾಡಿದ್ದಾರೆ.

ಆರಂಭದಲ್ಲಿ 1,000 ರೂ.ಗಳಿಂದ 3,000 ರೂ. ನಗದು ತೊಡಗಿಸಿದಾಗ ಅವರ ಖಾತೆಗೆ ಅಷ್ಟೇ ಮೊತ್ತದ ಹಣ ಜಮೆಯಾಗಿತ್ತು. ಆ ಬಳಿಕ ಆನ್ಲೈನ್ ನಲ್ಲಿ ಹಣ ಹೂಡಿಕೆಗೆ ಮತ್ತೆ ಒತ್ತಾಯಿಸಿದ್ದಾನೆ. ಅದರಂತೆ ದೂರುದಾರರಿಂದ ಹಂತಹಂತವಾಗಿ ಆಗಸ್ಟ್ 28ರವರೆಗೆ ಒಟ್ಟು 10.88 ಲಕ್ಷ ರೂ. ವರ್ಗಾಯಿಸಿಕೊಂಡಿದ್ದಾನೆ. ಆದರೆ ಆ ಬಳಿಕ ಯಾವುದೇ ಮೊತ್ತವನ್ನು ಮರುಪಾವತಿಸದೆ ವಂಚಿಸಿದ್ದಾನೆಂದು ಸೆನ್ ಠಾಣೆಯಲ್ಲಿ ದೂರು ದಾಖಲಾಗಿದೆ.

- Advertisement -
spot_img

Latest News

error: Content is protected !!