Thursday, June 4, 2026
Homeಕರಾವಳಿಉಡುಪಿಅಡಿಕೆ ಸುಲಿಯುತ್ತಲೇ ನ್ಯೂಸ್ ಆ್ಯಂಕರಿಂಗ್ ಅನುಕರಣೆ, ವೈರಲ್ ಆಯ್ತು ಕರಾವಳಿಯ ಪ್ರತಿಭೆಯ ವಿಡಿಯೋ

ಅಡಿಕೆ ಸುಲಿಯುತ್ತಲೇ ನ್ಯೂಸ್ ಆ್ಯಂಕರಿಂಗ್ ಅನುಕರಣೆ, ವೈರಲ್ ಆಯ್ತು ಕರಾವಳಿಯ ಪ್ರತಿಭೆಯ ವಿಡಿಯೋ

- Advertisement -
- Advertisement -

ಮಂಗಳೂರು : ಸೋಷಿಯಲ್ ಮೀಡಿಯಾ ಬಂದ್ಮೇಲೆ ಅನಾನುಕೂಲಗಳಷ್ಟೇ ಅನುಕೂಲಗಳು ಕೂಡ ಆಗಿವೆ. ಅದೆಷ್ಟೋ ಮಂದಿ ಪ್ರತಿಭೆಯ ಅನಾವರಣಕ್ಕೆ ವೇದಿಕೆಯಾಗಿದೆ ಸೋಷಿಯಲ್ ಮೀಡಿಯಾ. ಇದೀಗ ಸೋಷಿಯಲ್ ಮೀಡಿಯಾದಲ್ಲಿ ಅಪ್ಪಟ ಕರಾವಳಿಯ ಪ್ರತಿಭೆಯೊಂದರ ವಿಡಿಯೋ ವೈರಲ್ ಆಗಿದೆ.

ಹೌದು.. ಅಡಿಕೆ ಸುಲಿಯುತ್ತಾ ನ್ಯೂಸ್ ಆ್ಯಂಕರ್ ನ್ನು ಯುವಕನೊಬ್ಬ ಇಮಿಟೇಟ್ ಮಾಡುವ ವಿಡಿಯೋ ಭಾರೀ ಸದ್ದು ಮಾಡುತ್ತಿದೆ. ಇವರ ಮಾತಿನ ನಿರ್ಗಳತೆ ನೋಡಿದ್ರೆ ಇವರು ಯಾವ ನ್ಯೂಸ್ ಆ್ಯಂಕರ್ ಗೂ ಕಮ್ಮಿ ಇಲ್ಲ ಅಂತಾ ಅನ್ನಿಸದೇ ಇರೋದಿಲ್ಲ. ಒಬ್ಬಾತ ನ್ಯೂಸ್ ಆ್ಯಂಕರ್ ಆದ್ರೆ ಪಕ್ಕದಲ್ಲೇ ಇದ್ದ ಇನ್ನೊಬ್ಬ ವ್ಯಕ್ತಿ ರಿಪೋರ್ಟರ್ ಆಗಿ ಆ್ಯಕ್ಟ್ ಮಾಡ್ತಾರೆ. ಇಬ್ಬರ ಮಾತಿನ ಶೈಲಿ ನೋಡಿದ್ರೆ ಎಂಥವರಾದ್ರೂ ಫಿದಾ ಆಗೋದು ಗ್ಯಾರಂಟಿ ಅಷ್ಟು ಸೊಗಸಾಗಿದೆ ಇವರ ಮಾತುಕತೆ. ಮೊದಲಿಗೆ ಹೆಡ್ ಲೈನ್ಸ್ ನಿಂದ ನ್ಯೂಸ್ ಆರಂಭಿಸುವ ಆ ವ್ಯಕ್ತಿ ಬಳಿಕ ಒಂದೊಂದೇ ಸುದ್ದಿಯನ್ನು ವಿವರಿಸುತ್ತಾ ಹೋಗುತ್ತಾರೆ. ಇವರ ನ್ಯೂಸ್ ರೀಡಿಂಗ್ ಶೈಲಿ ನೋಡಿದ್ರೆ ನ್ಯೂಸ್ ಚಾನೆಲ್ ಗಳಿಂದ ಇವರೆಷ್ಟು ಪ್ರಭಾವಿತರಾಗಿದ್ದಾರೆ ಅನ್ನೋದು ಕನ್ಫರ್ಮ್ ಆಗ್ತಿದೆ. ಇನ್ನು ಈ ವ್ಯಕ್ತಿಯ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ.

ಈತ ಯಾವ ನ್ಯೂಸ್ ಆ್ಯಂಕರ್ ಗೆ ಕಮ್ಮಿ‌ ಹೇಳಿ…

Posted by Maha Xpress on Friday, 28 August 2020

- Advertisement -

Latest News

error: Content is protected !!