Sunday, April 28, 2024
Homeಕರಾವಳಿಬಂಟ್ವಾಳ: ಮನೆಯಲ್ಲಿ ಮಲಗಿರುವ ಯುವತಿಗೆ ಲೈಂಗಿಕ ಕಿರುಕುಳ ನೀಡಲು ಯತ್ನ; ಆರೋಪಿಯ ವಿರುದ್ಧ ದೂರು ದಾಖಲು

ಬಂಟ್ವಾಳ: ಮನೆಯಲ್ಲಿ ಮಲಗಿರುವ ಯುವತಿಗೆ ಲೈಂಗಿಕ ಕಿರುಕುಳ ನೀಡಲು ಯತ್ನ; ಆರೋಪಿಯ ವಿರುದ್ಧ ದೂರು ದಾಖಲು

spot_img
- Advertisement -
- Advertisement -

ಬಂಟ್ವಾಳ; ಮನೆಯಲ್ಲಿ ಯುವತಿಯೊಬ್ಬಳು ಮಲಗಿದ್ದ ಕೋಣೆಯ ಕಿಟಕಿ ತೆರೆದು ಯುವಕನೊಬ್ಬ ಲೈಂಗಿಕ ಕಿರುಕುಳ ನೀಡಲು ಯತ್ನಿಸಿದ ಘಟನೆ ಬಾಳ್ತಿಲ ಎಂಬಲ್ಲಿ ನಡೆದಿದೆ. ಈ ಬಗ್ಗೆ ಬಂಟ್ವಾಳ ನಗರ ಪೋಲೀಸ್ ಠಾಣೆಯಲ್ಲಿ ಯುವತಿ ದೂರು ದಾಖಲಿಸಿದ್ದಾಳೆ.

ಬಂಟ್ವಾಳ ತಾಲೂಕಿನ ಕಲ್ಲಡ್ಕ ಸಮೀಪದ ಬಾಳ್ತಿಲ ಗ್ರಾಮದ ಕುದ್ರೆಬೆಟ್ಟು ಎಂಬಲ್ಲಿ ಈ ಘಟನೆ ಸೆ.20 ರಂದು ರಾತ್ರಿ 10 ಗಂಟೆಯ ಬಳಿಕ ನಡೆದಿದೆ ಎನ್ನಲಾಗಿದೆ.ಪಕ್ಕದ ಮನೆಯವನೇ ಆದ ಆರೋಪಿ ಮನೆಯ ಕೋಣೆಯ ಕಿಟಕಿಯ ಪರದೆಯನ್ನು ಸರಿಸಿ ಬಳಿಕ ಕಿಟಕಿ ಮೂಲಕ ಯುವತಿಗೆ ಲೈಂಗಿಕ ಕಿರುಕುಳ ನೀಡುವ ಉದ್ದೇಶದಿಂದ ಇಣುಕಿ ನೋಡುತ್ತಿದ್ದ ಎನ್ನಲಾಗಿದೆ.ಈತ ಕಿಟಕಿಯ ಬಳಿ ನಿಂತು ಇಣುಕಿ ನೋಡುತ್ತಿದ್ದನ್ನು ಗಮನಿಸಿ ದೂರುದಾರರು ಜೋರಾಗಿ ಕಿರುಚಿದಾಗ ಅಲ್ಲಿಂದ ಓಡಿ ಹೋಗಿದ್ದಾನೆ.ಈ ಬಗ್ಗೆ ಯುವತಿ ದೂರು ನೀಡಿದ್ದಾಳೆ.

ಇನ್ನು ದೂರುದಾರರ ತಂದೆ ನಿಧನ ಹೊಂದಿದ್ದು, ತಾಯಿ ಹಾಗೂ ಮೂವರು ಹೆಣ್ಣುಮಕ್ಕಳು ಮನೆಯಲ್ಲಿ ಇದ್ದಾರೆ.ಮನೆಯಲ್ಲಿ ಮಹಿಳೆಯರೇ ಇರುವ ಕಾರಣ ಈತ ರಾತ್ರಿ ವೇಳೆ ಲೈಂಗಿಕ ಕಿರುಕುಳ ನೀಡಲು ಬಂದಿದ್ದ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಈತನ ಬಂಧಿಸಿ ಸೂಕ್ತವಾದ ಕಾನೂನು ಕ್ರಮ ಕೈಗೊಳ್ಳುವಂತೆ ಸ್ಥಳೀಯರು ಪೋಲೀಸರಿಗೆ ಮನವಿ ಮಾಡಿದ್ದಾರೆ.

- Advertisement -
spot_img

Latest News

error: Content is protected !!