Wednesday, June 3, 2026
Homeಕರಾವಳಿಸುಳ್ಯ: ಅಪ್ರಾಪ್ತ ಮಗನಿಗೆ ದ್ವಿಚಕ್ರ ವಾಹನ ಚಲಾಯಿಸಲು ಅವಕಾಶ ನೀಡಿದ ವ್ಯಕ್ತಿಗೆ 10,000 ರೂ ದಂಡ..!

ಸುಳ್ಯ: ಅಪ್ರಾಪ್ತ ಮಗನಿಗೆ ದ್ವಿಚಕ್ರ ವಾಹನ ಚಲಾಯಿಸಲು ಅವಕಾಶ ನೀಡಿದ ವ್ಯಕ್ತಿಗೆ 10,000 ರೂ ದಂಡ..!

- Advertisement -
- Advertisement -

ಸುಳ್ಯ: ಅಪ್ರಾಪ್ತ ವಯಸ್ಸಿನ ಮಕ್ಕಳಿಗೆ ವಾಹನ ಚಲಾಯಿಸಲು ಅಥವಾ ಓಡಿಸಲು ಅವಕಾಶ ನೀಡುವ ಪೋಷಕರಿಗೆ ಎಚ್ಚರಿಕೆ ನೀಡಬೇಕಾಗಿದೆ, ಹದಿಹರೆಯದ ಮಗನಿಗೆ ದ್ವಿಚಕ್ರ ವಾಹನ ಚಲಾಯಿಸಲು ಅವಕಾಶ ನೀಡಿದ ವ್ಯಕ್ತಿಯೊಬ್ಬನಿಗೆ 10,000 ರೂಪಾಯಿ ದಂಡ ವಿಧಿಸಲಾಗಿದೆ.

ಅಪ್ರಾಪ್ತ ಮಗ ಕಾನೂನು ಉಲ್ಲಂಘಿಸಿ ದ್ವಿಚಕ್ರ ವಾಹನ ಚಲಾಯಿಸಿದ್ದು ಸಾಬೀತಾದ ಹಿನ್ನೆಲೆಯಲ್ಲಿ ಇಲ್ಲಿನ ತಾಲೂಕು ನ್ಯಾಯಾಲಯ ಆ ವ್ಯಕ್ತಿಗೆ 10 ಸಾವಿರ ರೂಪಾಯಿ ದಂಡ ವಿಧಿಸಿದೆ.

ತಾಲೂಕಿನ ದೇವಚಳ್ಳ ಗ್ರಾಮದ ಸುರೇಶ್ ಎಂಬಾತ ತನ್ನ ದ್ವಿಚಕ್ರ ವಾಹನವನ್ನು ತನ್ನ ಅಪ್ರಾಪ್ತ ಮಗನಿಗೆ ಓಡಿಸಲು ಕೊಟ್ಟಿದ್ದ.

ತಾಲೂಕಿನ ದೇವಚಳ್ಳ ಗ್ರಾಮದ ಸುರೇಶ್ ಎಂಬಾತ ತನ್ನ ದ್ವಿಚಕ್ರ ವಾಹನವನ್ನು ತನ್ನ ಅಪ್ರಾಪ್ತ ಮಗನಿಗೆ ಓಡಿಸಲು ಕೊಟ್ಟಿದ್ದರು.

ಅಪ್ರಾಪ್ತ ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದುದನ್ನು ಗಮನಿಸಿದ ಸುಬ್ರಹ್ಮಣ್ಯ ಪೊಲೀಸರು ಆತನನ್ನು ತಡೆದು ಪ್ರಕರಣ ದಾಖಲಿಸಿದ್ದರು. ನಂತರ, ನ್ಯಾಯಾಲಯದಲ್ಲಿ ತೀರ್ಪು ಪ್ರಕಟಿಸಲಾಯಿತು.

- Advertisement -

Latest News

error: Content is protected !!