Friday, June 5, 2026
Homeಕರಾವಳಿಬೆಳ್ತಂಗಡಿ; ಉಜಿರೆಯಲ್ಲಿ ಹಲಸಿನ ಹಣ್ಣು ಕೊಯ್ಯಲು ಮರಕ್ಕೆ ಹತ್ತಿದ ವ್ಯಕ್ತಿ ಮರದಿಂದ ಬಿದ್ದು ಸಾವು

ಬೆಳ್ತಂಗಡಿ; ಉಜಿರೆಯಲ್ಲಿ ಹಲಸಿನ ಹಣ್ಣು ಕೊಯ್ಯಲು ಮರಕ್ಕೆ ಹತ್ತಿದ ವ್ಯಕ್ತಿ ಮರದಿಂದ ಬಿದ್ದು ಸಾವು

- Advertisement -
- Advertisement -

ಬೆಳ್ತಂಗಡಿ: ಹಲಸಿನ ಹಣ್ಣು ಕೊಯ್ಯಲು ಮರಕ್ಕೆ ಹತ್ತಿದ ವ್ಯಕ್ತಿ ಮರದಿಂದ ಬಿದ್ದು ಸಾವನ್ನಪ್ಪಿದ ಘಟನೆ ಉಜಿರೆ ಗ್ರಾಮದ ಕಾಶಿಬೆಟ್ಟು ಸಮೀಪದ ಅರಳಿ ಎಂಬಲ್ಲಿ ಇಂದು ಬೆಳಿಗ್ಗೆ ನಡೆದಿದೆ.ಅರಳಿ ನಿವಾಸಿ ರಾಜೇಶ್ (45) ಮೃತ ದುರ್ದೈವಿ.

ರಾಜೇಶ್ ತಮ್ಮ ಅಕ್ಕನ ಮನೆಯಲ್ಲಿ ಹಲಸಿನ ಹಣ್ಣು ತೆಗೆಯಲೆಂದು ಮರ ಹತ್ತಿದ್ದರು. ಈ ವೇಳೆ  ಮರಕ್ಕೆ ಇಟ್ಟಿದ್ದ ಏಣಿಯೊಂದಿಗೆ ಜಾರಿ ಬಿದ್ದು ಗಂಭೀರ ಗಾಯಗೊಂಡಿದ್ದಾರೆ. ತಕ್ಷಣ ಅವರನ್ನು ಆಸ್ಪತ್ರೆಗೆ ಕೊಂಡುಹೋಗುವಷ್ಟರಲ್ಲೇ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.

- Advertisement -

Latest News

error: Content is protected !!