Thursday, June 25, 2026
Homeಕರಾವಳಿಉಡುಪಿಉಡುಪಿ: ಮೀನು ಹಿಡಿಯಲು ಹೋಗಿದ್ದ ವ್ಯಕ್ತಿ ಕಾಲು ಜಾರಿ ಬಿದ್ದು ಸಾ*ವು

ಉಡುಪಿ: ಮೀನು ಹಿಡಿಯಲು ಹೋಗಿದ್ದ ವ್ಯಕ್ತಿ ಕಾಲು ಜಾರಿ ಬಿದ್ದು ಸಾ*ವು

- Advertisement -
- Advertisement -

ಉಡುಪಿ: ಮೀನು ಹಿಡಿಯಲು ಹೋಗಿದ್ದ ವ್ಯಕ್ತಿ ಕಾಲು ಜಾರಿ ಬಿದ್ದು ಸಾ*ವನ್ನಪ್ಪಿರುವ ಘಟನೆ ಅಜೆಕಾರಿನ ಮಾಂಜ ಎರ್ಮಾಳ್ ಗುಂಡಿ ಎಂಬಲ್ಲಿ ನಡೆದಿದೆ.  ವಿಶ್ವನಾಥ್ ಮೃತ ವ್ಯಕ್ತಿ.

ವಿಶ್ವನಾಥ ಅವರಿಗೆ ಮದ್ಯಪಾನ ಮಾಡುವ ಚಟ ಹೊಂದಿದ್ದು ಹಾಗೂ 10 ವರ್ಷಗಳಿಂದ ಅಸ್ತಮ ರೋಗದಿಂದ ಬಳಲುತ್ತಿದ್ದು , ಈ ಬಗ್ಗೆ ಕಡ್ತಲ ಕ್ಲಿನಿಕ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದು. ಈ ದಿನ ದಿನಾಂಕ 20/12/2025 ರಂದು ಸಂಜೆ 4:30 ಗಂಟೆಗೆ ಚಂದ್ರಶೇಖರ ಅವರೊಂದಿಗೆ ಮರ್ಣೇ ಗ್ರಾಮದ ಮಾಂಜ ಎರ್ಮಾಳ್ ಗುಂಡಿ ಎಂಬಲ್ಲಿಗೆ ಮೀನು ಹಿಡಿಯಲು ಮನೆಯಿಂದ ಹೋಗಿದ್ದಾರೆ. ಈ ವೇಳೆ  ಮೀನು ಹಿಡಿಯುವಾಗ ಆಕಸ್ಮಿಕವಾಗಿ ಕಾಲು ಜಾರಿ ನೀರಿಗೆ ಕವುಚಿ ಬಿದ್ದು ಮೃತಪಟ್ಟಿದ್ದಾರೆ. ಈ ಬಗ್ಗೆ ಅಜೆಕಾರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Latest News

error: Content is protected !!