Friday, June 5, 2026
Homeಕರಾವಳಿಕಾಸರಗೋಡು : ಫ್ಲೈವುಡ್ ಫ್ಯಾಕ್ಟರಿಯ ಸ್ಲ್ಯಾಬ್ ಕುಸಿದು ಬಿದ್ದು ಮೇಲ್ವಿಚಾರಕ ಸಾವು

ಕಾಸರಗೋಡು : ಫ್ಲೈವುಡ್ ಫ್ಯಾಕ್ಟರಿಯ ಸ್ಲ್ಯಾಬ್ ಕುಸಿದು ಬಿದ್ದು ಮೇಲ್ವಿಚಾರಕ ಸಾವು

- Advertisement -
- Advertisement -

ಕಾಸರಗೋಡು : ಫ್ಲೈವುಡ್ ಫ್ಯಾಕ್ಟರಿಯ ಸ್ಲ್ಯಾಬ್ ಕುಸಿದು ಬಿದ್ದು ಮೇಲ್ವಿಚಾರಕ ಸಾವನ್ನಪ್ಪಿರುವ ಘಟನೆ ಕುಂಬಳೆ ಸಮೀಪದ ಅನಂತಪುರದಲ್ಲಿ ಇಂದು ಮಧ್ಯಾಹ್ನ ನಡೆದಿದೆ.ಪಯ್ಯನ್ನೂರ್ ಕೇಲೊತ್ ನಿವಾಸಿ ರೌಫ್ (60) ಮೃತ ದುರ್ದೈವಿ.

ಹಲವು ವರ್ಷಗಳಿಂದ ಕಾರ್ಯಾಚರಿಸುತ್ತಿರುವ ಫ್ಯಾಕ್ಟರಿಯ ನವೀಕರಣ ಕಾಮಗಾರಿ ನಡೆಯುತ್ತಿದ್ದು, ಇದರಂತೆ ನಿರ್ಮಿಸಲಾದ ಸ್ಲ್ಯಾಬ್ ಕುಸಿದು ಬಿದ್ದು‌ ಅವರು ಅಲ್ಲೇ ಸಾವನ್ನಪ್ಪಿದ್ದಾರೆ. ಸ್ಲ್ಯಾಬ್‌ನಡಿಗೆ ಬಿದ್ದ ರೌಫ್ ರನ್ನು ಹೊರತೆಗೆದು ಆಸ್ಪತ್ರೆಗೆ ತಲಪಿಸಿದರೂ ಆಗಲೇ ಮೃತಪಟ್ಟಿದ್ದರು. ಕುಂಬಳೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲಿಸಿದ್ದಾರೆ..

- Advertisement -

Latest News

error: Content is protected !!