Thursday, June 4, 2026
Homeಕರಾವಳಿಕೇರಳದಿಂದ ಜಾನುವಾರು ಸಾಗಾಟಕ್ಕೆ ನಿಷೇಧ ಹೇರಿ ದ.ಕ.ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಆದೇಶ

ಕೇರಳದಿಂದ ಜಾನುವಾರು ಸಾಗಾಟಕ್ಕೆ ನಿಷೇಧ ಹೇರಿ ದ.ಕ.ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಆದೇಶ

- Advertisement -
- Advertisement -

ಮಂಗಳೂರು; ಕೇರಳದಿಂದ ಜಾನುವಾರು ಸಾಗಾಟಕ್ಕೆ ನಿಷೇಧ ಹೇರಿ ದ.ಕ.ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಆದೇಶ  ಹೊರಡಿಸಿದ್ದಾರೆ. ಕಾಲುಬಾಯಿ ಜ್ವರ ದ.ಕ.ಜಿಲ್ಲೆಗೆ ಹರಡದಂತೆ ಮುನ್ನೆಚ್ಚರಿಕೆ ತೆಗೆದುಕೊಳ್ಳುವ ನಿಟ್ಟಿನಲ್ಲಿ ಕೇರಳದಿಂದ ಜಿಲ್ಲೆಗೆ ಹಾಗೂ ಜಿಲ್ಲೆಯಿಂದ ಕೇರಳಕ್ಕೆ ಜಾನುವಾರುಗಳನ್ನು ಸಾಗಾಣಿಕೆ ಮಾಡುವುದನ್ನು ನಿಷೇಧಿಸಿ ದ.ಕ.ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಆದೇಶ ಹೊರಡಿಸಿದ್ದಾರೆ.

ಕೇರಳ ರಾಜ್ಯದಲ್ಲಿ ಜಾನುವಾರುಗಳಿಗೆ ಕಾಲುಬಾಯಿ ಜ್ವರ ಕಾಣಿಸಿಕೊಂಡಿದೆ. ಈ ರೋಗದ ವೈರಸ್‌ನಿಂದ ಬಹುಬೇಗ ಆರೋಗ್ಯವಂತ ಜಾನುವಾರುಗಳಿಗೆ ಹರಡುತ್ತದೆ. ಇದು ಜಾನುವಾರುಗಳಿಗೆ ಮಾರಣಾಂತಿಕವಾಗಿರುವುದರಿಂದ ಮುಂದಿನ ಆದೇಶದವರೆಗೆ ಜಾನುವಾರು ಸಾಗಾಟ ನಿಷೇಧಿಸಲಾಗಿದೆ ಎಂದು ತಿಳಿಸಿದ್ದಾರೆ.

- Advertisement -

Latest News

error: Content is protected !!