Friday, June 5, 2026
Homeಕರಾವಳಿಬಂಟ್ವಾಳ:  ದಿನಸಿ ಸಾಮಾಗ್ರಿ ಖರೀದಿಸಿ ಮನೆಗೆ ವಾಪಾಸ್ಸಾಗುತ್ತಿದ್ದಾಗ ಕುಸಿದು ಬಿದ್ದು ವ್ಯಕ್ತಿ ಸಾವು

ಬಂಟ್ವಾಳ:  ದಿನಸಿ ಸಾಮಾಗ್ರಿ ಖರೀದಿಸಿ ಮನೆಗೆ ವಾಪಾಸ್ಸಾಗುತ್ತಿದ್ದಾಗ ಕುಸಿದು ಬಿದ್ದು ವ್ಯಕ್ತಿ ಸಾವು

- Advertisement -
- Advertisement -

ಬಂಟ್ವಾಳ:  ದಿನಸಿ ಸಾಮಾಗ್ರಿ ಖರೀದಿಸಿ ಮನೆಗೆ ವಾಪಾಸ್ಸಾಗುತ್ತಿದ್ದಾಗ ಕುಸಿದು ಬಿದ್ದು ವ್ಯಕ್ತಿ ಸಾವನ್ನಪ್ಪಿರುವ ಘಟನೆ ಮೆಲ್ಕಾರಿನಲ್ಲಿ ನಡೆದಿದೆ.

ಬೋಳಂಗಡಿ ನಿವಾಸಿ ಮ್ಯಾಕ್ಸಿಂ ಲೋಬೊ (56) ಮೃತ ದುರ್ದೈವಿ. ಮ್ಯಾಕ್ಸಿಂ ಅವರು ಮನೆಯಿಂದ ಮೆಲ್ಕಾರಿಗೆ ಹೋಗಿ ದಿನಸಿ ಸಾಮಾಗ್ರಿಗಳನ್ನು ತೆಗೆದುಕೊಂಡು ಮನೆಗೆ ಗೆ ಹೋಗುತ್ತಿದ್ದ ವೇಳೆ ಕುಸಿದು ಬಿದ್ದಿದ್ದಾರೆ. ತಕ್ಷಣ ಅವರನ್ನು ತುಂಬೆ ಆಸ್ಪತ್ರೆಗೆ ಸಾಗಿಸಲಾಗಿದ್ದು, ಅಲ್ಲಿ ಪರೀಕ್ಷಿಸಿದ ವೈದ್ಯರು ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ.

ತುಂಬೆ ಫ್ಲೈವುಡ್‌ ಫ್ಯಾಕ್ಟರಿಯಲ್ಲಿ ಉದ್ಯೋಗದಲ್ಲಿದ್ದು, ಸ್ವಯಂನಿವೃತ್ತಿ ಪಡೆದಿದ್ದ ಅವರು ವಿದೇಶದಲ್ಲಿ ಉದ್ಯೋಗದಲ್ಲಿರುವ ಪತ್ನಿ ಹಾಗೂ ಪುತ್ರಿಯನ್ನು ಅಗಲಿದ್ದಾರೆ.

- Advertisement -

Latest News

error: Content is protected !!