- Advertisement -
- Advertisement -
ಕಡಬ: ಪಂಚಾಯಿತಿ ನೀರು ಬಿಡಲು ಹೋದ ವ್ಯಕ್ತಿ ಅಸ್ವಸ್ಥಗೊಂಡು ಸಾವನ್ನಪ್ಪಿದ ಘಟನೆ ಕಡಬ ತಾಲೂಕು ಚಾರ್ವಾಕ ಗ್ರಾಮದಲ್ಲಿ ನಡೆದಿದೆ. ಮುದ್ವಾ ನಿವಾಸಿ ಅನಂದ ಎಂ (55) ಮೃತ ದುರ್ದೈವಿ.
ಮುದ್ವಾ ಪರಿಸರದ ಪಂಚಾಯತ್ ನೀರು ಸರಬರಾಜು ಮಾಡುವ ಕೆಲಸದಲ್ಲಿದ್ದ ಇವರು ಜ.12 ರಂದು ಮುಂಜಾನೆ ಎಂದಿನಂತೆ ಪಂಚಾಯತ್ ನೀರು ಬಿಡಲು ಹೋದವರು ಮರಳಿ ಮನೆಗೆ ಬಂದವರು ತೀವ್ರ ಅಸ್ವಸ್ಥಗೊಂಡಿದ್ದರು. ಕೂಡಲೇ ಅವರನ್ನು ಮನೆಯಲ್ಲಿದ್ದವರು ಆಟೋ ರಿಕ್ಷಾದಲ್ಲಿ ಕಾಣಿಯೂರಿನ ಖಾಸಗಿ ಕ್ಲಿನಿಕ್ ಗೆ ಕರೆದುಕೊಂಡು ಹೋಗಿ ಚಿಕಿತ್ಸೆಗಾಗಿ ದಾಖಲಿಸಿದ್ದರು. ವೈದ್ಯರು ಪರೀಕ್ಷಿಸಿ ಹೆಚ್ಚಿನ ಚಿಕಿತ್ಸೆಯ ಬಗ್ಗೆ ಬೇರೆ ಆಸ್ಪತ್ರೆಗೆ ಕರೆದುಕೊಂಡು ಹೋಗಲು ತಿಳಿಸಿದ ಕಾರಣ ಪುತ್ತೂರು ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು ಅಲ್ಲಿ ವೈದ್ಯರು ಪರೀಕ್ಷಿಸಿ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ.
ಈ ಬಗ್ಗೆ ಮೃತರ ಮಗ ಯಶವಂತ ಎಂಬವರು ನೀಡಿದ ದೂರಿನಂತೆ ಕಡಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
- Advertisement -