- Advertisement -
![]()
- Advertisement -
ಬಂಟ್ವಾಳ; ಕಣಜದ ಹುಳ(ಕೂಡೋಲು) ದಾಳಿಗೊಳಗಾಗಿ ವ್ಯಕ್ತಿ ಸಾವನ್ನಪ್ಪಿರುವ ಘಟನೆ ಮಾಣಿಲ ಗ್ರಾಮದ ಪಕಳಕುಂಜದಲ್ಲಿ ನಡೆದಿದೆ. ಮಾಣಿಲ ಗ್ರಾಮದ ಪಕಳಕುಂಜ ನಿವಾಸಿ ಶ್ರೀಕೃಷ್ಣ ನಾಯಕ್(50) ಮೃತ ದುರ್ದೈವಿ.
ಪೆರುವಾಯಿ ಸಮೀಪ ಆ.8ರಂದು ಸಾಯಂಕಾಲದ ವೇಳೆ ಕಣಜದ ಹುಳುವಿನ ದಾಳಿಯಿಂದಾಗಿ ಗಾಯಗೊಂಡಿದ್ದ ಶ್ರೀಕೃಷ್ಣ ರವರನ್ನು ರಾತ್ರಿಯೇ ಪುತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿಸಗಿತ್ತು. ಅಲ್ಲಿ ಅವರಿಗೆ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಿಸದೇ ಅವರು ಸಾವನ್ನಪ್ಪಿದ್ದಾರೆ.
- Advertisement -


