- Advertisement -
- Advertisement -
ಕಾಸರಗೋಡು:ಇಲಿನ ಕಿಮ್ಸ್ ಆಸ್ಪತ್ರೆ ಬಳಿ ನಿಂತಿದ್ದ ಮಹಿಳೆಯನ್ನು ಮೊಹಮ್ಮದ್ ಕೆಣಕಿ ಚುಡಾಯಿಸಿದ್ದಾನೆ ಈವೇಳೆ ಜನರು ಈತನನ್ನು ಅಟ್ಟಾಡಿಸಿಕೊಂಡು ಹೋಗಿದ್ದು, ಆತ ಹೃದಯಾಘಾತದಿಂದ ಸಾವನ್ನಪ್ಪಿದ್ದಾನೆ. ಹೊಡೆತತಿಂದು ಪ್ರಜ್ಞೆ ತಪ್ಪಿ ಬಿದ್ದ ವ್ಯಕ್ತಿಯನ್ನು ಆಸ್ಪತ್ರೆಗೆ ಸೇರಿಸುವುದರೊಳಗೆ ಆತ ಕೊನೆಯುಸಿರೆಳೆದಿದ್ದಾನೆ. ಚೆಮನಾಡ್ ಮೂಲದ ಮೊಹಮ್ಮದ್ ರಫೀಕ್ 48 ವರ್ಷ ಎಂಬಾತನೇ ಮೃತಪಟ್ಟ ವ್ಯಕ್ತಿ.
ಮೊಹಮ್ಮದ್ ರಫೀಕ್ ಮಹಿಳೆಯ ಹಿಂದೆ ನಿಂತು ಆಕೆಯನ್ನು ಚುಡಾಯಿಸಿದ್ದ ಆಗ ಮಹಿಳೆ ಜಗಳವಾಡಿದ್ದಾಳೆ. ಜನರು ಸೇರಿಬಿಡಬಹುದು ಎಂಬ ಭಯದಿಂದ ಆತ ಅಲ್ಲಿಂದ ಓಡಿದಾಗ ಆತನ ಹಿಂದೆಯೇ ಮಹಿಳೆ ಕೂಡ ಓಡಿದ್ದು ಆಟೋರಿಕ್ಷಾ ಡ್ರೈವರ್ಗಳು ಹಾಗೂ ಸ್ಥಳೀಯರು ಕೂಡ ಆತನಿಗೆ ಧರ್ಮದೇಟು ನೀಡಿದ್ದಾರೆ.
- Advertisement -