Sunday, June 7, 2026
Homeಕರಾವಳಿಉಡುಪಿಉಡುಪಿ; ಲಾಡ್ಜ್ ನಲ್ಲಿ ತಂಗಿದ್ದ ವ್ಯಕ್ತಿ ಮೃತ್ಯು

ಉಡುಪಿ; ಲಾಡ್ಜ್ ನಲ್ಲಿ ತಂಗಿದ್ದ ವ್ಯಕ್ತಿ ಮೃತ್ಯು

- Advertisement -
- Advertisement -

ಉಡುಪಿ: ಲಾಡ್ಜಿನಲ್ಲಿ ತಂಗಿದ್ದ ವ್ಯಕ್ತಿಯೊಬ್ಬರು ಮಲಗಿದಲ್ಲೇ ಸಾವನ್ನಪ್ಪಿರುವ ಘಟನೆ ಮಲ್ಪೆಯಲ್ಲಿ ನಡೆದಿದೆ. ಸುಶೀಲ್ ರಘುರಾಮ್ ಶೆಟ್ಟಿ (42) ಮೃತ ವ್ಯಕ್ತಿ. ಸುಶೀಲ್  ಹೃದಯಾಘಾತದಿಂದ ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ.

ಸುಶೀಲ್ ರಘುರಾಮ್ ಶೆಟ್ಟಿ  ಮುಂಬಯಿ ನಿವಾಸಿಯಾಗಿದ್ದು, ಡಿ.28ರಂದು ಮುಂಬಯಿಯಿಂದ ಊರಿಗೆ ಬಂದ ಇವರು ಡಿ.30ರಿಂದ ಮಲ್ಪೆಯ ಲಾಡ್ಜ್ ಒಂದರಲ್ಲಿ ತಂಗಿದ್ದರು. ಬಳಿಕ ಜ.6ರಂದು ಲಾಡ್ಜ್ ನಲ್ಲಿ ತಂಗಿದ್ದರು. ರಾತ್ರಿ 12 ಗಂಟೆಗೆ ಅಲ್ಲಿನ ಸಿಬ್ಬಂದಿ ಜೊತೆ ಮಾತನಾಡಿ ರೂಮ್‌ಗೆ ಹೋದವರು ಮಾರನೇ ದಿನ ಬೆಳಿಗ್ಗೆ ರೂಮ್‌ನಿಂದ ಹೊರಗೆ ಬಾರದೇ ಇದ್ದ ಹಿನ್ನೆಲೆ ಸಂಶಯಗೊಂಡು ಸಂಬಂಧಿ, ಹೊಟೇಲ್ ಸಿಬ್ಬಂದಿ, ಪೊಲೀಸರ ಸಮಕ್ಷಮದಲ್ಲಿ ರೂಮ್‌ನ ಬಾಗಿಲು ಒಡೆದು ಪರಿಶೀಲಿಸಿದ್ದು, ಈ ವೇಳೆ ಸುಶೀಲ್ ರಘುರಾಮ್ ಶೆಟ್ಟಿರವರು ಮಲಗಿದ ಸ್ಥಿತಿಯಲ್ಲಿದ್ದರು. ಮೇಲ್ನೋಟಕ್ಕೆ ಹೃದಯಾಘಾತದಿಂದ ಮೃತಪಟ್ಟಿರುವುದಾಗಿ ಕಂಡುಬಂದಿದೆ. ಈ ಬಗ್ಗೆ ಮಲ್ಪೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Latest News

error: Content is protected !!