Tuesday, April 30, 2024
Homeಕರಾವಳಿಕಡಬ; ರಾತ್ರಿ ಊಟ ಮಾಡಿ ಮಲಗಿದ ವ್ಯಕ್ತಿ ಮಲಗಿದಲ್ಲೇ ಸಾವು

ಕಡಬ; ರಾತ್ರಿ ಊಟ ಮಾಡಿ ಮಲಗಿದ ವ್ಯಕ್ತಿ ಮಲಗಿದಲ್ಲೇ ಸಾವು

spot_img
- Advertisement -
- Advertisement -

ಕಡಬ; ರಾತ್ರಿ ಊಟ ಮಾಡಿ ಮಲಗಿದ ವ್ಯಕ್ತಿ ಮಲಗಿದಲ್ಲೇ ಸಾವನ್ನಪ್ಪಿರುವ ಘಟನೆ ಶಿರಾಡಿ ಗ್ರಾಮದಲ್ಲಿ ನಡೆದಿದೆ. ಶಿರಾಡಿ ಗ್ರಾಮದ ಉಗ್ರಾಣಿಗುತ್ತು ನಿವಾಸಿ ಜೋನ್(51) ಮೃತ ದುರ್ದೈವಿ.

ಎ.11ರಂದು ರಾತ್ರಿ 10 ಗಂಟೆಗೆ ಮನೆಯಲ್ಲಿ ಊಟ ಮಾಡಿ ಮಲಗಿದ್ದವರು ಎ.12ರಂದು ಬೆಳಿಗ್ಗೆ 8 ಗಂಟೆಯಾದರೂ ಏಳದೇ ಇದ್ದ ಹಿನ್ನೆಲೆಯಲ್ಲಿ ಮನೆಯವರು ಆಂಬುಲೆನ್ಸ್‌ನಲ್ಲಿ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದು ಆಸ್ಪತ್ರೆಯಲ್ಲಿ ವೈದ್ಯರು ಪರೀಕ್ಷಿಸಿದಾಗ ಮೃತಪಟ್ಟಿರುವುದಾಗಿ ದೃಢಪಡಿಸಿದ್ದಾರೆ .

ಹೃದಯಾಘಾತದಿಂದ ಅಥವಾ ಇನ್ಯಾವುದೋ ಖಾಯಿಲೆಯಿಂದ ಮೃತಪಟ್ಟಿರುವುದಾಗಿ ಅವರ ತಂದೆ ಎ.ಜೆ.ಚಾಕೋ ಅವರು ನೀಡಿದ ದೂರಿನಂತೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಯುಡಿಆರ್ ನಂಬ್ರ 11/2024 ಕಲಂ:174 CRPC ಯಂತೆ ಪ್ರಕರಣ ದಾಖಲಾಗಿದೆ.

- Advertisement -
spot_img

Latest News

error: Content is protected !!