Sunday, June 7, 2026
Homeಕರಾವಳಿಬೆಳ್ತಂಗಡಿ: ರಾತ್ರಿ‌ ಮನೆಯಿಂದ ಎದ್ದು ಹೊರ ಹೋದ ವ್ಯಕ್ತಿಯ‌ ಶವ ಕೆರೆಯಲ್ಲಿ ಪತ್ತೆ

ಬೆಳ್ತಂಗಡಿ: ರಾತ್ರಿ‌ ಮನೆಯಿಂದ ಎದ್ದು ಹೊರ ಹೋದ ವ್ಯಕ್ತಿಯ‌ ಶವ ಕೆರೆಯಲ್ಲಿ ಪತ್ತೆ

- Advertisement -
- Advertisement -

ಬೆಳ್ತಂಗಡಿ: ರಾತ್ರಿ‌ ಮನೆಯಿಂದ ಎದ್ದು ಹೊರ ಹೋದ ವ್ಯಕ್ತಿಯ‌ ಶವ ಕೆರೆಯಲ್ಲಿ ಪತ್ತೆಯಾದ ಘಟನೆ‌ ತಾಲೂಕಿನ ಪುದುವೆಟ್ಟು ಗ್ರಾಮದ ನೂರ್ಲಾಲು ಎಂಬಲ್ಲಿ ನಡೆದಿದೆ. ರಜನ್ ಸಾಹೇಬ್(60) ಮೃತ‌ ದುರ್ದೈವಿ.

ಭಾನುವಾರ ರಾತ್ರಿ ಮನೆಯಿಂದ ಎದ್ದು ಹೊರ ಹೋಗಿದ್ದರು ರಜನ್. ವಾಪಾಸ್ ಮನೆಗೆ ಬಂದಿರಲಿಲ್ಲ.  ಸೋಮವಾರ ಅವರಿಗಾಗಿ ಹುಡುಕಾಟ ನಡೆಸಿದಾಗ ಪಕ್ಕದ ಹಾಮದ್ ಸಾಹೇಬ್ ಅವರ ಕೆರೆಯಲ್ಲಿ ಅವರ ಮೃತದೇಹ ತೇಲುತ್ತಿದ್ದ ರೀತಿಯಲ್ಲಿ ಪತ್ತೆಯಾಗಿದೆ.

ಹಲವು ವರ್ಷಗಳಿಂದ ಮಾನಸಿಕ ಖಿನ್ನತೆಗೆ ಔಷಧಿ ಸೇವಿಸುತ್ತಿದ್ದ ಅವರಿಗೆ ಮಧ್ಯೆ ಮಧ್ಯೆ ಒಮ್ಮೊಮ್ಮೆ ಆರೋಗ್ಯ ಏರುಪೇರಾಗುತ್ತಿತ್ತು ಎನ್ನಲಾಗಿದೆ.

ಮೃತರು ಪತ್ನಿ ಫಾತಿಮಾ,‌ ಮಕ್ಕಳಾದ ಮುಸ್ತಫಾ, ರಫೀಕ್ ಮತ್ತು ನಿಶ್ಮಾ‌ ಹಾಗೂ ಬಂಧುವರ್ಗದವರನ್ನು ಅಗಲಿದ್ದಾರೆ.ಸ್ಥಳಕ್ಕೆ ಧರ್ಮಸ್ಥಳ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

- Advertisement -

Latest News

error: Content is protected !!