Wednesday, June 24, 2026
Homeಕರಾವಳಿಮಂಗಳೂರುಮೂಡಬಿದಿರೆ : ನೇಣು ಬಿಗಿದುಕೊಂಡು ವ್ಯಕ್ತಿ ನೇಣಿಗೆ ಶರಣು

ಮೂಡಬಿದಿರೆ : ನೇಣು ಬಿಗಿದುಕೊಂಡು ವ್ಯಕ್ತಿ ನೇಣಿಗೆ ಶರಣು

- Advertisement -
- Advertisement -

ಮೂಡಬಿದಿರೆ : ನೇಣು ಬಿಗಿದುಕೊಂಡು ವ್ಯಕ್ತಿ ನೇಣಿಗೆ ಶರಣಾಗಿರುವ ಘಟನೆ ಕಲ್ಲಬೆಟ್ಟುವಿನ ನೀರಲ್ಕೆಯಲ್ಲಿ ನಡೆದಿದೆ. ಕಲ್ಲಬೆಟ್ಟು ನೀರಲ್ಕೆಯ ನಿವಾಸಿ ಕೂಲಿ ಕಾರ್ಮಿಕ ಸಂಜಯ್ ಯಾನೆ ಮುನ್ನಾ(26) ಮೃತ ದುರ್ದೈವಿ.
ಶುಕ್ರವಾರ ರಾತ್ರಿವರೆಗೆ ಮನೆಯಲ್ಲಿಯೇ ಇದ್ದ ಸಂಜಯ್ ಅವರು ನಂತರ ಮನೆಯಿಂದ ಹೊರ ಹೋಗಿದ್ದಾರೆನ್ನಲಾಗಿದೆ. ಬೆಳಿಗ್ಗೆ ಮನೆ ಹತ್ತಿರದ ಹಾಡಿಯಲ್ಲಿ‌ ಮರಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿದೆ. ಕೂಲಿ ಕಾರ್ಮಿಕರಾಗಿರುವ ಸಂಜಯ್ ಅವರು ಆರ್ಥಿಕ ಸಂಕಷ್ಟವನ್ನು ಅನುಭವಿಸುತ್ತಿದ್ದು, ಇದೇ ಕಾರಣದಿಂದ ಆತ್ಮಹತ್ಯೆ ಮಾಡಿಕೊಂಡಿರಬಹುದೆಂದು ಸ್ಥಳೀಯರು ಸಂಶಯ ವ್ಯಕ್ತ ಪಡಿಸಿದ್ದಾರೆ.ಈ ಬಗ್ಗೆ ಮೂಡಬಿದಿರೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

- Advertisement -

Latest News

error: Content is protected !!