Saturday, June 6, 2026
Homeಕರಾವಳಿಮಂಗಳೂರುಕಡಬ: ದೈವಸ್ಥಾನದ ಬಾಗಿಲಿನ ಬೀಗ ಒಡೆದು ಕಳ್ಳತನಕ್ಕೆ ಯತ್ನಿಸುತ್ತಿದ್ದಾತನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ ಸ್ಥಳೀಯರು

ಕಡಬ: ದೈವಸ್ಥಾನದ ಬಾಗಿಲಿನ ಬೀಗ ಒಡೆದು ಕಳ್ಳತನಕ್ಕೆ ಯತ್ನಿಸುತ್ತಿದ್ದಾತನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ ಸ್ಥಳೀಯರು

- Advertisement -
- Advertisement -

ಕಡಬ: ದೈವಸ್ಥಾನದ ಬಾಗಿಲಿನ ಬೀಗ ಒಡೆದು ಕಳ್ಳತನಕ್ಕೆ ಯತ್ನಿಸುತ್ತಿದ್ದಾತನನ್ನು ಹಿಡಿದು ಸ್ಥಳೀಯರು ಪೊಲೀಸರಿಗೆ ಒಪ್ಪಿಸಿದ ಘಟನೆ ಆಲಂಕಾರಿನಲ್ಲಿ ನಡೆದಿದೆ.

ಜೂ.10 ರ ರಾತ್ರಿ  ಆಲಂಕಾರು ಗ್ರಾಮಕ್ಕೆ ಸಂಬಂಧಿಸಿದ ಉಳ್ಳಾಕ್ಲು ಮತ್ತು ಅಣ್ಣಪ್ಪಸ್ವಾಮಿಯ ದೈವಸ್ಥಾನಕ್ಕೆ 08-00 ಗಂಟೆ ವೇಳೆಗೆ ದೈವಸ್ಥಾನದ ಬಳಿ ಉಸ್ತುವಾರಿ ನೋಡಿಕೊಳ್ಳುತ್ತಿದ್ದ ಗುತ್ತು ಮನೆಯ ಕೀರ್ತಿ  ಎಂಬವರು  ಬಂದಾಗ ಓರ್ವ ವ್ಯಕ್ತಿ  ದೈವಸ್ಥಾನದ ಬಾಗಿಲಿನ ಬೀಗವನ್ನು ಒಡೆಯಲು ಪ್ರಯತ್ನಿಸುತ್ತಿದ್ದದ್ದು ಕಂಡು ಬಂದಿದೆ.

ಕೀರ್ತಿ ಕೂಡಲೇ ಪರಿಚಯಸ್ಥರೋರ್ವರಿಗೆ ಕರೆ ಮಾಡಿ ತಿಳಿಸಿದ ಹಿನ್ನೆಲೆ ಜೊತೆಯಾಗಿ ಬಂದು ಅಪರಿಚಿತನನ್ನು ವಿಚಾರಿಸಿದ್ದಾರೆ. ಸಮರ್ಪಕವಾಗಿ ಉತ್ತರಿಸಿದ ಹಿನ್ನೆಲೆ ಪೊಲೀಸ್ ಠಾಣೆಗೆ ಕರೆತಂದು  ದೂರು ನೀಡಿದ್ದರು.ಪೊಲೀಸರ ವಿಚಾರಣೆ ಸಂದರ್ಭ ತನ್ನ ಹೆಸರು ಹನುಮಂತರಾಯ ಯಾನೆ ಗೌಡನಗೌಡ ಎಂಬುದಾಗಿ ತಿಳಿಸಿರುವುದಾಗಿ ತಿಳಿದು ಬಂದಿದೆ. ಆತನ ವಿಳಾಸ ಕೇಳಿದರೆ ಆತ ಯಾವುದೇ ಉತ್ತರ ನೀಡಿಲ್ಲ. ಈತನನ್ನು ವಶಕ್ಕೆ ಪಡೆದಿರುವ ಕಡಬ ಪೊಲೀಸರು ಸದ್ಯ ವಿಚಾರಣೆಗೆ ಒಳಪಡಿಸುತ್ತಿದ್ದಾರೆ.

- Advertisement -

Latest News

error: Content is protected !!