Saturday, June 6, 2026
Homeತಾಜಾ ಸುದ್ದಿಕೇಕ್ ಎಂದು ಅಮೆಜಾನ್ ನಲ್ಲಿ ಸಗಣಿ ಬೆರಣಿ ಆರ್ಡರ್ ಮಾಡಿದ ಭೂಪ: ತಿಂದ ಮೇಲೆ ಆತನ...

ಕೇಕ್ ಎಂದು ಅಮೆಜಾನ್ ನಲ್ಲಿ ಸಗಣಿ ಬೆರಣಿ ಆರ್ಡರ್ ಮಾಡಿದ ಭೂಪ: ತಿಂದ ಮೇಲೆ ಆತನ ರಿವ್ಯೂ ನೋಡಿ ತಲೆಸುತ್ತಿ ಬಿದ್ದ ನೆಟ್ಟಿಗರು!

- Advertisement -
- Advertisement -

ಇವತ್ತು ಆನ್ ಲೈನ್ ಶಾಪಿಂಗ್ ಅನ್ನೋ ಮಹಾ ಪ್ರಪಂಚದಲ್ಲಿ ಏನ್ ಸಿಗುತ್ತೆ ಏನ್ ಸಿಗಲ್ಲ ಅಂತಾ ಹೇಳೋದಿಕ್ಕೆ ಸಾಧ್ಯಾನೇ ಇಲ್ಲ. ಕೈಯಲ್ಲಿ ದುಡ್ಡಿದ್ರೆ ಸಾಕು ಕುಳಿತಲ್ಲಿಂದಾನೇ ಏನ್ ಬೇಕಾದ್ರೂ ಆರ್ಡರ್ ಮಾಡ್ಬೋದು.

ಹೀಗೆ ಮಹಾನ್ ಬುದ್ಧಿವಂತನೊಬ್ಬ ಅಮೆಜಾನ್ ನಲ್ಲಿ  ಕೌ ಡಂಗ್ ಕೇಕ್ ಎಂದು ಇದ್ದದ್ದನ್ನು ನೋಡಿ ಸಗಣಿ ಬೆರಣಿಯನ್ನು ಆರ್ಡರ್ ಮಾಡಿದ್ದಾನೆ, ಅಲ್ಲದೇ ಅದನ್ನು ಕೇಕ್ ಎಂದು ತಿಂದಿದ್ದಾನೆ. ತಿಂದ ಮೇಲೆ ತನಗೆ ತೊಂದರೆಯಾಯ್ತು ಅಂತಾ ರಿವ್ಯೂ ಬೇರೆ ಹಾಕಿದ್ದಾನೆ. ಇದರ ರುಚಿ ತುಂಬಾನೇ ಕೆಟ್ಟದಾಗಿತ್ತು. ಅದು ಹುಲ್ಲಿನ ಹಾಗಿತ್ತು. ತಿಂದ ಮೇಲೆ ನನಗೆ ಬೇಧಿ ಶುರುವಾಯ್ತು ಎಂದು ಕಮೆಂಟ್ ಹಾಕಿದ್ದಾನೆ, ಇದೀಗ ಈ ಮಹಾ ಬುದ್ಧಿವಂತನ ಆರ್ಡರ್ ಫಜೀತಿ ನೋಡಿ ನೆಟ್ಟಿಗರು ಬಿದ್ದು ಬಿದ್ದು ನಗ್ತಿದ್ದಾರೆ.ಅಲ್ಲದೇ ಎಲ್ಲೆಡೆ ವೈರಲ್ ಆಗಿದೆ.

- Advertisement -

Latest News

error: Content is protected !!