Thursday, June 4, 2026
Homeಕರಾವಳಿಮಂಗಳೂರು; ಮಾದಕ ವಸ್ತು ಸಹಿತ ಆರೋಪಿಯ ಸೆರೆ

ಮಂಗಳೂರು; ಮಾದಕ ವಸ್ತು ಸಹಿತ ಆರೋಪಿಯ ಸೆರೆ

- Advertisement -
- Advertisement -

ಮಂಗಳೂರು: ನಗರದಲ್ಲಿ ಮಾರಾಟ ಮಾಡುವುದಕ್ಕಾಗಿ ಬೆಂಗಳೂರಿನಿಂದ ನಿಷೇಧಿತ ‘ಎಂಡಿಎಂಎ’ ಮಾದಕ ವಸ್ತು ತಂದಿದ್ದ  ಸಹಿತ ಆರೋಪಿಯನ್ನು ಮಾದಕವಸ್ತು ಸಹಿತ ಸಿಸಿಬಿ ಮಂಗಳೂರು ಘಟಕ ಪೊಲೀಸರು ಬಂಧಿಸಿದ್ದಾರೆ.ಕಾಸರಗೋಡು ಮೂಲದ ಅಬ್ದುಲ್ಲಾ ಸಿ. (39) ಬಂಧಿತ ಆರೋಪಿ.

ಈತ ಬೆಂಗಳೂರಿನಿಂದ ಕಾರಿನಲ್ಲಿ ನಗರಕ್ಕೆ ನಿಷೇಧಿತ ಮಾದಕ ವಸ್ತು ಎಂಡಿಎಂಎ ಮಾತ್ರೆಗಳನ್ನು ಸಾಗಾಟ ಮಾಡುತ್ತಿರುವ ಬಗ್ಗೆ ಮಾಹಿತಿ ಪಡೆದ ಸಿಸಿಬಿ ಘಟಕದ ಎಸಿಪಿ ನೇತೃತ್ವದ ಪೊಲೀಸರು ದಾಳಿ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ..

ಆರೋಪಿಯಿಂದ 7.50 ಲಕ್ಷ ರೂ. ಬೆಲೆಯ 150 ಗ್ರಾಂ ಎಂಡಿಎಂಎ ವಶಪಡಿಸಿಕೊಂಡಿದ್ದಾರೆ. ಅದಲ್ಲದೆ ಕೃತ್ಯಕ್ಕೆ ಬಳಸಿದ ಕಾರು, ಮೊಬೈಲ್, 1,260 ರೂ. ವಶಪಡಿಸಿಕೊಂಡಿದ್ದಾರೆ. ಇವೆಲ್ಲದರ ಒಟ್ಟು ಮೌಲ್ಯ 17,61,260 ರೂ. ಎಂದು ಅಂದಾಜಿಸಲಾಗಿದೆ.

ಆರೋಪಿಯ ವಿರುದ್ಧ ಈ ಹಿಂದೆ ವಿಶಾಖಪಟ್ಟಣದಲ್ಲಿ 45 ಕೆಜಿ ಗಾಂಜಾ ಹೊಂದಿದ್ದ ಬಗ್ಗೆ ಮತ್ತು ಕಾಸರಗೋಡಿನ ವಿದ್ಯಾನಗರದಲ್ಲಿ ಮಾದಕ ವಸ್ತು ಸೇವನೆ ಮಾಡಿದ ಆರೋಪಕ್ಕೆ ಸಂಬಂಧಿಸಿ ಪ್ರಕರಣ ದಾಖಲಾಗಿತ್ತು.

- Advertisement -

Latest News

error: Content is protected !!