Wednesday, June 3, 2026
Homeತಾಜಾ ಸುದ್ದಿಅಭಿಷೇಕ್ ಅಂಬರೀಷ್-ಅವಿವಾ ವಿವಾಹ ಯಾವಾಗ ಗೊತ್ತಾ?

ಅಭಿಷೇಕ್ ಅಂಬರೀಷ್-ಅವಿವಾ ವಿವಾಹ ಯಾವಾಗ ಗೊತ್ತಾ?

- Advertisement -
- Advertisement -

ಬೆಂಗಳೂರು; ಸಂಸದೆ ಸುಮಲತಾ ಪುತ್ರ ಅಭಿಷೇಕ್ ಅಂಬರೀಶ್ ಅವರ ಮದುವೆಗಾಗಿ ಭರ್ಜರಿ ತಯಾರಿಯಲ್ಲಿದ್ದಾರೆ. ಈಗಾಗಲೇ ಪ್ರಧಾನಿ ಸಹಿತ ಹಲವರನ್ನು ವಿವಾಹಕ್ಕೆ ಆಹ್ವಾನಿಸಲಾಗಿದೆ.

ಅಂದ್ಹಾಗೆ ಅಭಿಷೇಕ್ ಹಾಗೂ ಅವಿವಾ ವಿವಾಹ ಜೂನ್ 9 ಹಾಗೂ 10 ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯಲಿದೆ. ವಿಶೇಷವೆಂದರೆ ಮಂಡ್ಯದಲ್ಲಿ ಜೂನ್ 12 ರಂದು ರಿಸೆಪ್ಷನ್ ಹಾಗೂ ಬೀಗರ ಊಟ ಕಾರ್ಯಕ್ರಮ ನಡೆಯಲಿದೆ. ಅಭಿಷೇಕ್ ಹಾಗೂ ಅವಿವಾ ವಿವಾಹಕ್ಕೆ ಸುಮಾರು 10,000 ಅತಿಥಿಗಳು ಆಗಮಿಸುವ ನಿರೀಕ್ಷೆ ಇದೆ. ಹಲವು ರಾಜ್ಯ ಹಾಗೂ ರಾಷ್ಟ್ರಮಟ್ಟದ ರಾಜಕೀಯ ಗಣ್ಯರು. ಸ್ಯಾಂಡಲ್​ವುಡ್ ಮಾತ್ರವೇ ಅಲ್ಲದೆ ಬಾಲಿವುಡ್, ತೆಲುಗು ಚಿತ್ರರಂಗ, ತಮಿಳು, ಮಲಯಾಳಂ ಚಿತ್ರರಂಗದಿಂದಲೂ ಸ್ಟಾರ್​ಗಳು ಆಗಮಿಸಿದ್ದಾರೆ. ಜೊತೆಗೆ ಅಭಿಷೇಕ್ ಹಾಗೂ ಸುಮಲತಾ ಅಂಬರೀಶ್ ಅವರ ಅಭಿಮಾನಿಗಳು ಸಹ ಮದುವೆಗೆ ಆಗಮಿಸಲಿದ್ದಾರೆ.

ಮದುವೆಗೆ ಕೇಂದ್ರದ ಪ್ರಮುಖ ರಾಜಕಾರಣಿಗಳ ಜೊತೆಗೆ, ಮಾಜಿ ಸಿಎಂ ಯಡಿಯೂರಪ್ಪ, ಸಿದ್ದರಾಮಯ್ಯ ಇನ್ನೂ ಹಲವು ರಾಜಕಾರಣಿಗಳ ಜೊತೆಗೆ, ಮೆಗಾಸ್ಟಾರ್ ಚಿರಂಜೀವಿ, ತಮಿಳಿನ ಸೂಪರ್ ಸ್ಟಾರ್ ರಜನೀಕಾಂತ್, ಬಾಲಿವುಡ್​ನಿಂದ ಶತ್ರುಘ್ನ ಸಿನ್ಹಾ ಇನ್ನೂ ಹಲವು ಪ್ರಮುಖ ತಾರೆಯರು ಅಭಿಷೇಕ್ ಹಾಗೂ ಅವಿವಾ ಮದುವೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಮದುವೆಗೆ ಆಭರಣ, ವಸ್ತ್ರಗಳ ಖರೀದಿ ಜೋರಾಗಿ ನಡೆದಿದ್ದು, ಸ್ವತಃ ವಸ್ತ್ರ ವಿನ್ಯಾಸಕಿ ಆಗಿರುವ ಅವಿವಾ ಬಿದ್ದಪ್ಪ ಅವರೇ ತಮ್ಮ ಹಾಗೂ ಅಭಿಷೇಕ್ ತೊಡಲಿರುವ ಉಡುಗೆಯನ್ನು ಡಿಸೈನ್ ಮಾಡುತ್ತಿದ್ದಾರೆ.

- Advertisement -

Latest News

error: Content is protected !!