Wednesday, June 3, 2026
Homeಕರಾವಳಿಮಂಗಳೂರು ಮೂಡಬಿದಿರೆ; ಜ್ಯುವೆಲ್ಲರಿ ಶಾಪ್ ನಲ್ಲಿ ಕಳ್ಳತನ ಮಾಡಿ ಪರಾರಿಯಾಗುತ್ತಿದ್ದವನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ ಸಾರ್ವಜನಿಕರು

 ಮೂಡಬಿದಿರೆ; ಜ್ಯುವೆಲ್ಲರಿ ಶಾಪ್ ನಲ್ಲಿ ಕಳ್ಳತನ ಮಾಡಿ ಪರಾರಿಯಾಗುತ್ತಿದ್ದವನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ ಸಾರ್ವಜನಿಕರು

- Advertisement -
- Advertisement -

ಮೂಡಬಿದಿರೆ; ಜ್ಯುವೆಲ್ಲರಿ ಶಾಪ್ ನಲ್ಲಿ ಕಳ್ಳತನ ಮಾಡಿ ಪರಾರಿಯಾಗುತ್ತಿದ್ದವನನ್ನು ಹಿಡಿದು ಸಾರ್ವಜನಿಕರು ಪೊಲೀಸರಿಗೆ ಒಪ್ಪಿಸಿದ ಘಟನೆ ಮೂಡಬಿದರೆಯಲ್ಲಿ ನಡೆದಿದೆ. ಗುರುರಾಯನಕೆರೆಯ ರಮೇಶ ಬಂಧಿತ.

ಆರೋಪಿ ರಮೇಶ ಮೂಡಬಿದರೆಯ ಅಲಂಕಾರ್ ಜ್ಯುವೆಲ್ಲರ್ಸ್ ಗೆ ಸೋಮವಾರ ಮಧ್ಯಾಹ್ನದ ವೇಳೆಗೆ ಗ್ರಾಹಕರ ಸೋಗಿನಲ್ಲಿ ಬಂದು ಎರಡು ಉಂಗುರಗಳನ್ನು ತನ್ನ ಪ್ಯಾಂಟ್ ಕಿಸೆಯೊಳಗೆ ಹಾಕಿದ್ದಾನೆ. ಅದನ್ನು ಮತ್ತೊಬ್ಬ ಗ್ರಾಹಕರು ಗಮನಿಸಿದ್ದಾರೆ.  ಬಳಿಕ ಅಲ್ಲಿಂದ ಹೋಗಿದ್ದಾನೆ. ಆತ ಅಲ್ಲಿಂದ ಕಾಲ್ಕಿತ್ತ ಬಳಿಕ ಗ್ರಾಹಕರು ಜುವೆಲ್ಲರಿ ಮಾಲೀಕನ ಗಮನಕ್ಕೆ ತಂದಿದ್ದಾರೆ. ಕೂಡಲೇ ಆತನನ್ನು ಹಿಡಿಯಲು ಯತ್ನಿಸಿದಾಗ ಓಡಲು ಶುರು ಮಾಡಿದ್ದಾನೆ. ಅಷ್ಟರಲ್ಲಿ ಸಾರ್ವಜನಿಕರೇ ಆತನನ್ನು ಸೆರೆಹಿಡಿದಿದ್ದಾರೆ. ಬಾಯಿ ಬಿಡಿಸುವ ಯತ್ನದಲ್ಲಿ ಸಾರ್ವಜನಿಕರು ಹಿಗ್ಗಾ ಮುಗ್ಗಾ ಥಳಿಸಿದ್ದಾರೆ.ಬಳಿಕ  ಪೊಲೀಸರಿಗೊಪ್ಪಿಸಿದ್ದಾರೆ.

- Advertisement -

Latest News

error: Content is protected !!