Thursday, June 4, 2026
Homeಕರಾವಳಿಅಕ್ರಮವಾಗಿ ವಿದೇಶಿ ಕರೆನ್ಸಿ ಸಾಗಾಟ: ಮಂಗಳೂರಿನಲ್ಲಿ ವ್ಯಕ್ತಿಯ ಬಂಧನ

ಅಕ್ರಮವಾಗಿ ವಿದೇಶಿ ಕರೆನ್ಸಿ ಸಾಗಾಟ: ಮಂಗಳೂರಿನಲ್ಲಿ ವ್ಯಕ್ತಿಯ ಬಂಧನ

- Advertisement -
- Advertisement -

ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಮೂಲಕ ದುಬೈಗೆ ಸುಮಾರು 4 ಲಕ್ಷದ 35ಸಾವಿರ 200 ರೂ. ಮೌಲ್ಯದ ವಿದೇಶಿ ಕರೆನ್ಸಿಯನ್ನು ಅಕ್ರಮವಾಗಿ ಸಾಗಾಟ ಮಾಡಲು ಯತ್ನಿಸಿದ ವ್ಯಕ್ತಿಯನ್ನು ಸಿಐಎಸ್‌ಎಫ್ ಅಧಿಕಾರಿಗಳು ಪತ್ತೆ ಮಾಡಿ ಬಂಧಿಸಿದ್ದಾರೆ.

ಬಂಧಿತ ಆರೋಪಿಯನ್ನು ಕಾಸರಗೋಡಿನ ಚಿತ್ತಾರಿಯ ಬಾರಿಕ್ಕಾಡ್‌‌ ನಿವಾಸಿ ತಾಜುದ್ದೀನ್‌ (39) ಎಂದು ಗುರುತಿಸಲಾಗಿದೆ. ಈತ ನಿನ್ನೆ ಸಂಜೆ 4.30 ರ ಸುಮಾರಿಗೆ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದಾನೆ. ಈ ವೇಳೆ ಆತನನ್ನು ತಪಾಸಣೆ ನಡೆಸಿದಾಗ ಯುರೋಪಿಯನ್‌ ಕರೆನ್ಸಿ ಯೂರೊ ಹಾಗೂ ಯುಎಇ ದಿರಾಮ್‌‌ ಪತ್ತೆಯಾಗಿದೆ.

ತನ್ನ ಒಳ ಉಡುಪಿನಲ್ಲಿ ಅಡಗಿಸಿಟ್ಟುಕೊಂಡು ಕರೆನ್ಸಿಯನ್ನು ಸಾಗಿಸಲು ಯತ್ನಿಸಿದ್ದ. ಸಿಐಎಸ್‌ಎಫ್ ಅಧಿಕಾರಿ ದೇವೇಂದರ್ ಸಿಂಗ್ ಅವರು ಅಕ್ರಮ ಸಾಗಾಟ ಮಾಡುತ್ತಿದ್ದ ವಿದೇಶಿ ಕರೆನ್ಸಿಯನ್ನು ಪತ್ತೆ ಹಚ್ಚಿದ್ದಾರೆ. ಆರೋಪಿ ಹಾಗೂ ವಶಪಡಿಸಿಕೊಂಡ ವಸ್ತುಗಳನ್ನು ಮುಂದಿನ ತನಿಖೆಗಾಗಿ ಕಸ್ಟಮ್ಸ್‌ ಅಧಿಕಾರಿಗಳಿಗೆ ಹಸ್ತಾಂತರಿಸಲಾಗಿದೆ ಎಂದು ವಿಮಾನ ನಿಲ್ದಾಣದ ಮೂಲಗಳು ತಿಳಿಸಿವೆ.       

- Advertisement -

Latest News

error: Content is protected !!