Thursday, April 25, 2024
Homeಕರಾವಳಿಬಂಟ್ವಾಳ ರಾಜಕೀಯದಲ್ಲಿ ಭಾರಿ ಹೈಡ್ರಾಮ: ಕಾಂಗ್ರೆಸ್ ಬೆಂಬಲಿತ ಜಿ.ಪಂ ಸದಸ್ಯೆ, ತಾ.ಪಂ ಸದಸ್ಯ ಹಾಗೂ ಜಿಲ್ಲಾ...

ಬಂಟ್ವಾಳ ರಾಜಕೀಯದಲ್ಲಿ ಭಾರಿ ಹೈಡ್ರಾಮ: ಕಾಂಗ್ರೆಸ್ ಬೆಂಬಲಿತ ಜಿ.ಪಂ ಸದಸ್ಯೆ, ತಾ.ಪಂ ಸದಸ್ಯ ಹಾಗೂ ಜಿಲ್ಲಾ ನಾಯಕನ ಸಹಿತ ಹಲವರು ಬಿಜೆಪಿಗೆ ಸೇರ್ಪಡೆ

spot_img
- Advertisement -
- Advertisement -

ಮಂಗಳೂರು: ಗ್ರಾಮ ಪಂಚಾಯಿತಿ ಚುನಾವಣೆ ರಂಗೇರಿದ್ದು ಪಕ್ಷಾಂತರ ಪರ್ವವೂ ಜೋರಾಗಿದೆ. ಬಂಟ್ವಾಳದಲ್ಲಿ ಕಾಂಗ್ರೆಸ್ ಜಿಲ್ಲಾ ನಾಯಕರು ಇಂದು ಬಿಜೆಪಿಗೆ ಕಾಂಗ್ರೆಸ್‌ ಸೇರ್ಪಡೆಗೊಂಡಿದ್ದಾರೆ. ದ.ಕ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಜಿಲ್ಲಾ ಕಾಂಗ್ರೆಸ್ ನ ಹಿಂದುಳಿದವರ್ಗಗಳ ಅಧ್ಯಕ್ಷ ಮಾದವ ಮಾವೆ,ಮಾಣಿ ಜಿ.ಪಂ ಸದಸ್ಯೆ ಮಂಜುಳಾ ಮಾವೆ, ಕನ್ಯಾನ ತಾ.ಪಂ ಸದಸ್ಯ ಕುಮಾರ್ ಭಟ್ ಇವರುಗಳು ತಮ್ಮ ನೂರಾರು ಬೆಂಬಲಿಗರೊಂದಿಗೆ ಬಿಜೆಪಿಗೆ ಸೇರ್ಪಡೆಗೊಂಡರು.

ಬಿಜೆಪಿ ರಾಜ್ಯಧ್ಯಾಕ್ಷ ನಳಿನ್ ಕುಮಾರ್ ಕಟೀಲು,ದ.ಕ ಜಿಲ್ಲಾಧ್ಯಕ್ಷ ಸುದರ್ಶನ್,ಬಂಟ್ವಾಳ ಶಾಸಕರಾದ ರಾಜೇಶ್ ನಾಯ್ಕ್ ಉಳಿಪ್ಪಾಡಿ,ಬಂಟ್ವಾಳ ಬಿಜೆಪಿ ಕ್ಷೇತ್ರಾಧ್ಯಕ್ಷ ದೇವಪ್ಪ ಪೂಜಾರಿ,ಮಾಜಿ ಶಾಸಕರಾದ ಪದ್ಮನಾಭ ಕೊಟ್ಟಾರಿಯವರ ಸಮ್ಮುಖದಲ್ಲಿ ಇಂದು ಬಿಜೆಪಿಗೆ ಸೇರ್ಪಡೆಗೊಂಡರು.

ಗ್ರಾಮ ಪಂಚಾಯತ್ ಚುನಾವಣೆ ಕೇವಲ ನಾಲ್ಕು ದಿನಗಳಿರುವಾಗಲೇ ನಾಯಕತ್ವದ ಕೊರತೆಯಿಂದ ಸತತ ಸೋಲಿನ ವೈಫಲ್ಯದಿಂದ ಬೇಸತ್ತು ಕಾಂಗ್ರೆಸ್ ನ ಹಿರಿಯ ನಾಯಕರು ಬಿಜೆಪಿಗೆ ಸೇರಿರುವುದು ಕಾಂಗ್ರೆಸ್ ಪಕ್ಷಕ್ಕೆ ದೊಡ್ಡ ಹೊಡೆತ ಬಿದ್ದಿರುವುದಂತೂ ಸುಳ್ಳಲ್ಲ. ಇನ್ನಷ್ಟು ಕಾಂಗ್ರೆಸ್ ನಾಯಕರುಗಳು ಬಿಜೆಪಿಗೆ ಸೇರ್ಪಡೆಗೆ ತುದಿಗಾಲಲ್ಲಿ ನಿಂತಿದ್ದು ಬಿಜೆಪಿ ನಾಯಕರುಗಳೊಂದಿಗೆ ಸಂಪರ್ಕದಲ್ಲಿದ್ದು ಮುಂಬರುವ ಪಂಚಾಯತ್ ಚುನಾವಣೆಗೆ ಮೊದಲೇ ಪರೋಕ್ಷವಾಗಿ ಬಂಟ್ವಾಳದಲ್ಲಿ ಕಾಂಗ್ರೆಸ್ ಸೋಲೊಪ್ಪಿಕೊಂಡಂತಾಗಿದೆ ಎನ್ನುವುದು ಬಿಜೆಪಿಯ ವಿಜಯದ ಕನಸಿಗೆ ಆನೆಬಲ ಬಂದಂತಾಗಿದೆ.

- Advertisement -
spot_img

Latest News

error: Content is protected !!