Saturday, June 6, 2026
Homeಕರಾವಳಿಉಡುಪಿಮಲ್ಪೆ : ರೆಸಾರ್ಟ್ ನಲ್ಲಿ ತಂಗಿದ್ದ ಮಹಿಳೆ ಹೃದಯಾಘಾತಕ್ಕೆ ಬಲಿ

ಮಲ್ಪೆ : ರೆಸಾರ್ಟ್ ನಲ್ಲಿ ತಂಗಿದ್ದ ಮಹಿಳೆ ಹೃದಯಾಘಾತಕ್ಕೆ ಬಲಿ

- Advertisement -
- Advertisement -

ಮಲ್ಪೆ : ರೆಸಾರ್ಟ್ ನಲ್ಲಿ ತಂಗಿದ್ದ ಮಹಿಳೆ ಹೃದಯಾಘಾತಕ್ಕೆ ಬಲಿಯಾಗಿರುವ ಘಟನೆ ಮಲ್ಪೆ ಪಡುಕೆರೆ ಎಂಬಲ್ಲಿ ಬೆಂಗಳೂರಿನ ಎಲ್.ಜಾಕ್ಸನ್ ಎಂಬವರ ಪತ್ನಿ ಲೆನ್ಸಿ ಮೇರಿ ಯಾನೆ ಸೂರ್ಯ(36) ಮೃತ ಮಹಿಳೆ.

ಲೆನ್ಸಿ ಮೇರಿ ಅವರು ಫೆ.26ರಂದು ಇತರ 9 ಮಂದಿಯೊಂದಿಗೆ ಬೆಂಗಳೂರಿನಿಂದ ಹೊರಟು ಪಡುಕೆರೆಯ ರೆಸಾರ್ಟ್‌ನಲ್ಲಿ ಉಳಿದುಕೊಂಡಿದ್ದರು. ಫೆ.27ರಂದು ಮಲ್ಪೆ ಬೀಚ್‌ನಲ್ಲಿ ಸುತ್ತಾಡಿ ಬಂದು ರಾತ್ರಿ ಮಲಗಿದ್ದರು. ಫೆ.28ರಂದು ಬೆಳಗ್ಗೆ 8.30ಕ್ಕೆ ಲೆನ್ಸಿ ಮೇರಿಯನ್ನು ಎಬ್ಬಿಸಿದಾಗ ಎದ್ದಿಲ್ಲ. ಹಾಗಾಗಿ ಕೂಡಲೇ ಮಣಿಪಾಲ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತು. ಅಲ್ಲಿ ಪರೀಕ್ಷಿಸಿದ ವೈದ್ಯರು ಆಕೆ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ. ಲೆನ್ಸಿ ಮೇರಿ ಹೃದಯಾಘಾತದಿಂದಲೋ ಅಥವಾ ಅನಾರೋಗ್ಯದಿಂದಲೋ ಅಥವಾ ಇನ್ನಾವುದೋ ಕಾರಣದಿಂದ ಮೃತಪಟ್ಟಿರಬಹುದೆಂದು ಶಂಕಿಸಲಾಗಿದೆ.ಈ ಕುರಿತು ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Latest News

error: Content is protected !!