Saturday, October 17, 2026
Homeಕರಾವಳಿಉಡುಪಿಮಲ್ಪೆ: ಏರ್‌ಗನ್ ಮೂಲಕ ಸಾಕು ನಾಯಿಯ ಹತ್ಯೆ, ಆರೋಪಿ ಬಂಧನ

ಮಲ್ಪೆ: ಏರ್‌ಗನ್ ಮೂಲಕ ಸಾಕು ನಾಯಿಯ ಹತ್ಯೆ, ಆರೋಪಿ ಬಂಧನ

- Advertisement -
- Advertisement -

ಮಲ್ಪೆ: ಇಂದು ಬೆಳಗ್ಗೆ ಏರ್‌ಗನ್ ಮೂಲಕ ಶೂಟ್ ಮಾಡಿ ನಾಯಿಯನ್ನು ಸಾಯಿಸಿದ ವ್ಯಕ್ತಿಯೊಬ್ಬರನ್ನು ಮಲ್ಪೆ ಪೊಲೀಸರು ಬಂಧಿಸಿದ ಘಟನೆ ಕೆಮ್ಮಣ್ಣು ಎಂಬಲ್ಲಿ ನಡೆದಿದೆ. ಕೆಮ್ಮಣ್ಣುವಿನ ಬ್ರಾನ್ ಡಿಸೋಜ(50) ಬಂಧಿತ ಆರೋಪಿ.

ಈತ ಗುಂಡಪ್ಪ ಪೂಜಾರಿ ಎಂಬವರ ಸಾಕು ನಾಯಿಯನ್ನು ಏರ್‌ಗನ್ ಮೂಲಕ ಶೂಟ್ ಮಾಡಿ ಸಾಯಿಸಿರುವುದಾಗಿ ದೂರಲಾಗಿದೆ. ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Latest News

error: Content is protected !!