Friday, June 5, 2026
Homeತಾಜಾ ಸುದ್ದಿರಾಜ್ಯಸಭೆ ಕಾಂಗ್ರೆಸ್ ಅಭ್ಯರ್ಥಿ ಮಲ್ಲಿಕಾರ್ಜುನ ಖರ್ಗೆ : 6 ಕೋಟಿ ಆಸ್ತಿಯ ಒಡೆಯ

ರಾಜ್ಯಸಭೆ ಕಾಂಗ್ರೆಸ್ ಅಭ್ಯರ್ಥಿ ಮಲ್ಲಿಕಾರ್ಜುನ ಖರ್ಗೆ : 6 ಕೋಟಿ ಆಸ್ತಿಯ ಒಡೆಯ

- Advertisement -
- Advertisement -

ಬೆಂಗಳೂರು: ರಾಜ್ಯಸಭಾ ಚುನಾವಣೆಗೆ ಕಣಕ್ಕಿಳಿದಿರೋ ಕಾಂಗ್ರೆಸ್ ಹಿರಿಯ ಮುಖಂಡ ಮಲ್ಲಿಕಾರ್ಜುನ ಖರ್ಗೆ ನಿನ್ನೆ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ಉಮೇದುವಾರಿಕೆ ಜೊತೆಗೆ ಅವರು ತಮ್ಮ ಆಸ್ತಿ ವಿವರದ ಅಫಿಡವಿಟ್​ ಸಲ್ಲಿಸಿದ್ದು, ಚಿರಾಸ್ತಿ, ಸ್ಥಿರಾಸ್ತಿ ಸೇರಿ ತಮ್ಮ ಒಟ್ಟು ಆಸ್ತಿಯನ್ನ ಘೋಷಿಸಿಕೊಂಡಿದ್ದಾರೆ.
ಮಲ್ಲಿಕಾರ್ಜುನ ಖರ್ಗೆ ಅವರು ನಾಮಪತ್ರ ಸಲ್ಲಿಕೆ ವೇಳೆ ತಮ್ಮ ಆಸ್ತಿ ವಿವರದ ಅಫಿಡವಿಟ್ ಸಲ್ಲಿಸಿದ್ದು, ಚಿರಾಸ್ತಿ, ಸ್ಥಿರಾಸ್ತಿ ಸೇರಿ ತಮ್ಮ ಒಟ್ಟು ಆಸ್ತಿಯನ್ನು ಘೋಷಿಸಿದ್ದಾರೆ. ಮಲ್ಲಿಕಾರ್ಜುನ ಖರ್ಗೆ ಅವರ ಚರಾಸ್ತಿ 2,82,20,805 ರೂ. ಇದ್ದರೆ, ಸ್ಥಿರಾಸ್ತಿ 4,04,286 ರೂ. ಇದೆ. ಸ್ವಯಾರ್ಜಿತ ಆಸ್ತಿ ಒಟ್ಟು 6,06,45,174 ರೂ. ಇದೆ. ಇದರಲ್ಲಿ ಪಿತ್ರಾರ್ಜಿತ ಆಸ್ತಿ 94,73,550 ರೂ. ಇದ್ದರೆ ಬ್ಯಾಂಕ್ ಗಳಲ್ಲಿ ಒಟ್ಟು 10,00,000 ರೂ. ಸಾಲ ಪಡೆದಿದ್ದಾರೆ.
ಇನ್ನು ಮಲ್ಲಿಕಾರ್ಜುನ ಖರ್ಗೆ ಬಳಿ 225 ಗ್ರಾಂ ಚಿನ್ನಭರಣ ಇದ್ದು ಇದರ ಮೌಲ್ಯ, 10,71,000 ರೂ. ಇದೆ. 6 ಕೆಜಿ ಬೆಳ್ಳಿ ಇದ್ದು, ಇದರ ಬೆಲೆ 2,88,000 ರೂ. ಇದೆ ಎಂದು ಖರ್ಗೆ ಅಫಿಡವಿಟ್ ನಲ್ಲಿ ಮಾಹಿತಿ ನೀಡಿದ್ದಾರೆ.

- Advertisement -

Latest News

error: Content is protected !!