Thursday, June 4, 2026
Homeಕರಾವಳಿಮೂಡುಬಿದಿರೆ: ಮಹಾವೀರ ಕಾಲೇಜಿನ NSS ವಿದ್ಯಾರ್ಥಿಗಳ ಶೈಕ್ಷಣಿಕ ಪ್ರವಾಸ ಮತ್ತು ಚಾರಣ

ಮೂಡುಬಿದಿರೆ: ಮಹಾವೀರ ಕಾಲೇಜಿನ NSS ವಿದ್ಯಾರ್ಥಿಗಳ ಶೈಕ್ಷಣಿಕ ಪ್ರವಾಸ ಮತ್ತು ಚಾರಣ

- Advertisement -
- Advertisement -

ಮೂಡುಬಿದಿರೆ: ಇಲ್ಲಿನ ಶ್ರೀ ಮಹಾವೀರ ಪ್ರಥಮ ದರ್ಜೆ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ವಿದ್ಯಾರ್ಥಿಗಳು ಮಾರ್ಚ್ 6 ಮತ್ತು 7 ರಂದು ಎರಡು ದಿನಗಳ ಶೈಕ್ಷಣಿಕ ಪ್ರವಾಸ ಮತ್ತು ಚಾರಣ ಕೈಗೊಂಡರು.

ಚಿಕ್ಕಮಗಳೂರು ಜಿಲ್ಲೆಯ ಕಳಸ ಗ್ರಾಮಪಂಚಾಯತ್ ವ್ಯಾಪ್ತಿಯ ಅರಮನೆ ಮಕ್ಕಿ ಮೈದಾನ , ಪ್ರವಾಸಿ ತಾಣವಾದ ಅಂಬಾ ತೀರ್ಥ ದಲ್ಲಿ ಸ್ವಚ್ಛತಾ ಕಾರ್ಯಕ್ರಮ ನಡೆಸಿದರು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಗ್ರಾಮ ಪಂಚಾಯತ್ ಅಧ್ಯಕ್ಷರು ಮತ್ತು ಇತರರು ಉಪಸ್ಥಿತರಿದ್ದು ಕಾರ್ಯಕ್ರಮ ಸಾರ್ವಜನಿಕ ಪ್ರಶಂಸೆಗೆ ಪಾತ್ರವಾಯಿತು.

ಕಳಸದ ಆನೆಗುಡ್ಡೆ ಪರ್ವತಕ್ಕೆ ವಿದ್ಯಾರ್ಥಿಗಳು ಚಾರಣ ನಡೆಸಿದರು. ಮೂಡಬಿದ್ರೆಯಿಂದ ಹೊರಟ ತಂಡಕ್ಕೆ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಶ್ರೀ ನಾಗರಾಜ್ ಅವರು ಧ್ವಜ ಹಾರಿಸುವುದರ ಮೂಲಕ ಶುಭ ಹಾರೈಸಿದರು. ಕಾಲೇಜಿನ ಪ್ರಾಂಶುಪಾಲ ಡಾ ರಾಧಾಕೃಷ್ಣ ಶೆಟ್ಟಿ ಹಳೆ ವಿದ್ಯಾರ್ಥಿ ಸಂಘದ ಕೋಶಾಧಿಕಾರಿ ಪ್ರಸನ್ನ ಶೆಣೈ ಉಪಸ್ಥಿತರಿದರು. ವಿದ್ಯಾರ್ಥಿಗಳೊಂದಿಗೆ ಯೋಜನಾಧಿಕಾರಿ ಶ್ರೀ ಬಸನಗೌಡ ಪಾಟೀಲ್, ಪ್ರಾಧ್ಯಾಪಕರಾದ ಶ್ರೀ ಶಿವಪ್ರಸಾದ್, ಶ್ರೀಮತಿ ವಿನುತಾ ಶ್ರೀಮತಿ ವರ್ಷಿತಾ ಭಾಗವಹಿಸಿದರು. ರಾಷ್ಟ್ರೀಯ ಸೇವಾಯೋಜನೆಯ ಕಾರ್ಯದರ್ಶಿಗಳಾದ ಪ್ರಜ್ವಲ್ ಶೆಣೈ ಮತ್ತು ನಿಕ್ಷಿತ ಕಾರ್ಯಕ್ರಮವನ್ನು ಸಂಯೋಜಿಸಿದರು.

- Advertisement -

Latest News

error: Content is protected !!