- Advertisement -
- Advertisement -
ಬೆಳ್ತಂಗಡಿ: ಉಜಿರೆಯಲ್ಲಿ ನಡೆದ ವಿಶೇಷ ಮದ್ಯವರ್ಜನ ಶಿಬಿರದಲ್ಲಿ ಈ 106 ಮಂದಿ ಮದ್ಯಪಾನ ತ್ಯಜಿಸಿ ಹೊಸ ಜೀವನಕ್ಕೆ ಕಾಲಿಟ್ಟಿದ್ದಾರೆ.
ರಾಜ್ಯದ ವಿವಿಧ ಊರುಗಳಿಂದ ಬಂದ 106 ಮಂದಿಗೆ ಮನೋವೈದ್ಯಕೀಯ ಚಿಕಿತ್ಸೆ ಹಾಗೂ ಆಪ್ತ ಸಲಹೆ, ಸಮಾಲೋಚನೆಯೊಂದಿಗೆ ವ್ಯಸನ ಮುಕ್ತರಾಗಲು ಮಾರ್ಗದರ್ಶನ ಮತ್ತು ಪ್ರೇರಣೆ ನೀಡಲಾಯಿತು.
ಇನ್ನು ಶಿಬಿರವನ್ನು ಉದ್ದೇಶಿಸಿ ಮಾತನಾಡಿದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಜೀವನದಲ್ಲಿ ಸೋಲು ಮತ್ತು ಗೆಲುವನ್ನು ಸಮಾನವಾಗಿ ಸ್ವೀಕರಿಸಬೇಕು. ಪಂಚೇಂದ್ರಿಯಗಳ ನಿಯಂತ್ರಣದಿಂದ ಸಾರ್ಥಕ ಜೀವನ ನಡೆಸಬಹುದು ಎಂದು ಹೇಳಿದರು.
ಜನಜಾಗೃತಿ ವೇದಿಕೆಯ ಪ್ರಾದೇಶಿಕ ನಿರ್ದೇಶಕ ವಿವೇಕ್ ಪಾಯಸ್, ಯೋಜನಾಧಿಕಾರಿ ಕೆ. ಮೋಹನ್, ಶಿಬಿರಾಧಿಕಾರಿ ದಿನೇಶ್ ಮರಾಠಿ, ಆರೋಗ್ಯ ಸಹಾಯಕಿ ರಂಜಿತಾ ಇದ್ದರು. ಮುಂದಿನ ವಿಶೇಷ ಮದ್ಯವರ್ಜನ ಶಿಬಿರವು ಉಜಿರೆಯಲ್ಲಿ ಇದೇ 20ರಿಂದ ಪ್ರಾರಂಭವಾಗಲಿದೆ ಎಂದು ಜನಜಾಗೃತಿ ವೇದಿಕೆಯ ಪ್ರಕಟಣೆ ತಿಳಿಸಿದೆ.
- Advertisement -