- Advertisement -
- Advertisement -
ಮಡಿಕೇರಿ: ಭಾರೀ ಮಳೆಗೆ ಮಡಿಕೇರಿಯಿಂದ ಮಂಗಳೂರಿಗೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ 275ರಲ್ಲಿ ಮತ್ತೆ ಬಿರುಕು ಕಾಣಿಸಿಕೊಂಡಿದೆ.
ದೇವರಕೊಲ್ಲಿ ಕೊಯನಾಡು ಮಧ್ಯೆ ಇರುವ ಅರಣ್ಯ ಇಲಾಖೆಯ ಕಚೇರಿ ಬಳಿ ದೊಡ್ಡ ಪ್ರಮಾಣದಲ್ಲಿ ಬಿರುಕು ಕಾಣಿಸಿಕೊಂಡಿದ್ದು ರಸ್ತೆ ಸಂಪೂರ್ಣ ಕುಸಿದುಹೋಗುವ ಭೀತಿ ಎದುರಾಗಿದೆ.
ಒಂದು ವೇಳೆ ಕುಸಿದು ಹೋದರೆ ಮಡಿಕೇರಿ-ಮಂಗಳೂರು ರಸ್ತೆ ಸಂಪರ್ಕ ಕಡಿತವಾಗುವಾಗುವ ಸಾಧ್ಯತೆ ಇದೆ. ಸ್ಥಳಕ್ಕೆ ಮಡಿಕೇರಿ ತಹಶಿಲ್ದಾರ್ ಭೇಟಿ ನೀಡಿದ್ದು, ಭಾರೀ ವಾಹನ ಸಂಚಾರ ಬಂದ್ ಮಾಡಲಾಗಿದೆ.
- Advertisement -