Saturday, June 6, 2026
Homeಕರಾವಳಿಮಡಂತ್ಯಾರ್: ಮೀನು ಮಾರುತಿದ್ದ ಯುವಕನಿಗೆ ಕೊರೋನಾ ಪಾಸಿಟಿವ್

ಮಡಂತ್ಯಾರ್: ಮೀನು ಮಾರುತಿದ್ದ ಯುವಕನಿಗೆ ಕೊರೋನಾ ಪಾಸಿಟಿವ್

- Advertisement -
- Advertisement -

ಮಡಂತ್ಯಾರ್: ದಿನಂದಿಂದ ದಿನಕ್ಕೆ ಕಿಲ್ಲರ್ ಕೊರೋನಾ ತನ್ನ ಕಬಂಧಬಾಂಹುಗಳನ್ನು ಚಾಚುತ್ತಿದ್ದು, ಬೆಳ್ತಂಗಡಿ ತಾಲೂಕಿನ ಮಡಂತ್ಯಾರ್ ನಲ್ಲಿ ಮೀನು ವ್ಯಾಪಾರ ಮಾಡುತ್ತಿದ್ದ 30 ವಯಸ್ಸಿನ ಯುವಕನಿಗೆ ಕೊರೋನಾ ತಗುಲಿರುವುದು ದೃಢವಾಗಿದೆ.

ಇಲ್ಲಿಯ ಕಾನ್ವೆಂಟ್ರೋಡ್ ಸಂಬಂಧಿಕರ ಮನೆಯಲ್ಲಿ ವಾಸವಾಗಿದ್ದ ಬಿಸಿ ರೋಡಿನ ಯುವಕನಿಗೆ ಕೊರೋನಾ ಪಾಸಿಟಿವ್ ಬಂದಿದೆ.

ಯುವಕ ಒಂದೂವರೆ ತಿಂಗಳ ಹಿಂದೆ ಗೌಲ್ಫ್ ನಿಂದ ಬಂದು ಕೊರಂಟೈನ್ ಮುಗಿಸಿದ್ದರು. ಬಳಿಕ ಮಡಂತ್ಯಾರ್ ತನ್ನ ಸಂಬಂಧಿಕರ ಮನೆಯಲ್ಲಿದ್ದು ಮೀನು ವ್ಯಾಪಾರ ಮಾಡುತಿದ್ದರು ಎನ್ನಲಾಗಿದೆ. ತನಗೆ ಅಸೌಖ್ಯವಿದ್ದ ಕಾರಣ 15ದಿನದ ಮೊದಲುಚಿಕಿತ್ಸೆಗೆ ಒಳಪಟ್ಟು ತನ್ನ ಗಂಟಲ ದ್ರವ ಪರೀಕ್ಷಿಸಿದಾಗ ಕೊರೋನಾ ಪಾಸಿಟಿವ್ ಬಂದಿದೆ. ಮಡಂತ್ಯಾರಿನಲ್ಲಿ ವಾಸವಾಗಿದ್ದ ಮನೆಯಲ್ಲಿ ತನ್ನ, ಅಕ್ಕ, ಭಾವ, ಮತ್ತು 2 ಮಕ್ಕಳು ವಾಸವಾಗಿದ್ದು ಮನೆಯನ್ನು ಸೀಲ್ ಡೌನ್ ಮಾಡಲಾಗಿದೆ.

ಈ ಘಟನೆಯಿಂದ ಯುವಕನ ಕೈಯಿಂದ ಮೀನು ಖರೀದಿಸಿದವರು ಭಯದ ವಾತಾವರಣದಲ್ಲಿ ಬದುಕುವಂತಾಗಿದೆ.

- Advertisement -

Latest News

error: Content is protected !!