Tuesday, June 18, 2024
Homeಮನರಂಜನೆಲವ್ ಮಾಕ್ಟೇಲ್ 2' ಫಸ್ಟ್ಲುಕ್ ರಿಲೀಸ್; ಗಡ್ಡಧಾರಿಯಾದ ಕೃಷ್ಣ

ಲವ್ ಮಾಕ್ಟೇಲ್ 2′ ಫಸ್ಟ್ಲುಕ್ ರಿಲೀಸ್; ಗಡ್ಡಧಾರಿಯಾದ ಕೃಷ್ಣ

spot_img
- Advertisement -
- Advertisement -

ಬೆಂಗಳೂರು: ಈ ವರ್ಷದ ಸೂಪರ್​ ಹಿಟ್​ ಚಿತ್ರಗಳ ಪೈಕಿ ಮದರಂಗಿ ಕೃಷ್ಣ ಅಭಿನಯದ- ನಿರ್ದೇಶನದ ಲವ್​ ಮಾಕ್ಟೇಲ್​ ಚಿತ್ರ ಸಹ ಒಂದು. ಈ ಚಿತ್ರ ಬಿಡುಗಡೆಯಾಗಿ ಪ್ರೇಕ್ಷಕರಿಂದ ಮೆಚ್ಚುಗೆ ಪಡೆದಿತ್ತು. ಆದರೆ, ಲಾಕ್​ಡೌನ್​ನಿಂದಾಗಿ ಹೆಚ್ಚು ದಿನ ಪ್ರದರ್ಶನ ಕಾಣುವುದಕ್ಕೆ ಸಾಧ್ಯವಾಗಿರಲಿಲ್ಲ. ಆ ನಂತರ ಅಮೆಜಾನ್ ಪ್ರೈಮ್​ನಲ್ಲಿ ಚಿತ್ರ ಬಿಡುಗಡೆಯಾಗಿ, ಇನ್ನೂ ಹೆಚ್ಚು ಜನಪ್ರಿಯತೆ ಪಡೆಯಿತು. ಇದೀಗ ಸ್ವಾತಂತ್ರ್ಯ ದಿನದ ಪ್ರಯುಕ್ತ ಲವ್​ ಮಾಕ್​ಟೇಲ್​ 2 ಚಿತ್ರದ ಫಸ್ಟ್ ಲುಕ್​ ರಿಲೀಸ್ ಮಾಡಿದ್ದಾರೆ ಡಾರ್ಲಿಂಗ್​ ಕೃಷ್ಣ.

ಹೌದು, ಲವ್​ ಮಾಕ್ಟೇಲ್​ ಎಲ್ಲಿಗೆ ನಿಂತಿತ್ತೋ, ಅದನ್ನು ಅಲ್ಲಿಂದಲೇ ಮುಂದುವರೆಸುವ ಇಂಗಿತ ವ್ಯಕ್ತಪಡಿಸಿದ್ದ ಕೃಷ್ಣ, ಕಥೆ-ಚಿತ್ರಕಥೆ ಬರೆದು ಮುಗಿಸಿದ್ದಾರೆ. ಕರೊನಾ ಹಾವಳಿ ಕಡಿಮೆ ಆಗುತ್ತಿದ್ದಂತೆ ಶೂಟಿಂಗ್​ಗೆ ತೆರಳಲು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಪಾತ್ರವರ್ಗದಲ್ಲಿ ಹೊಸದಾಗಿ ಯಾರೆಲ್ಲ ಸೇರ್ಪಡೆಗೊಳ್ಳಲಿದ್ದಾರೆ? ಎಂಬ ಮಾಹಿತಿಯನ್ನು ಮುಂದಿನ ದಿನಗಳಲ್ಲಿ ನೀಡಲಿದ್ದಾರಂತೆ ನಟ ಡಾರ್ಲಿಂಗ್​ ಕೃಷ್ಣ.

ಈಗಾಗಲೇ ನಮ್ಮ ಸಿನಿಮಾದ ಸ್ಕ್ರಿಪ್ಟ್ ಕೆಲಸ ಮುಗಿದಿದೆ. ಕರೊನಾ ಹಾವಳಿ ತಗ್ಗುವುದನ್ನು ಎದುರು ನೋಡುತ್ತಿದ್ದೇವೆ. ಅದಾದ ಬಳಿಕ ಶೂಟಿಂಗ್​ ಕೆಲಸಗಳು ಶುರುವಾಗಲಿವೆ. ಚಿತ್ರದ ಫೋಟೋಶೂಟ್​ ಮಾಡಿದ್ದೇವೆ. ಈಗಾಗಲೇ ಬೇಕಾದ ಒಂದಷ್ಟು ದೃಶ್ಯಗಳ ಚಿತ್ರೀಕರಣವನ್ನೂ ಮಾಡಿಕೊಂಡಿದ್ದೇವೆ. ಮೊದಲಿನಂತೆ ಆಗುವುದನ್ನು ನೋಡುತ್ತಿದ್ದೇವೆ. ಹಾಗಾದರೆ, 30ರಿಂದ 35 ದಿನಗಳಲ್ಲಿ ಚಿತ್ರೀಕರಣ ಮುಗಿಸಿಕೊಳ್ಳಲಿದ್ದೇವೆ’ ಎಂದು ಮಾಹಿತಿ ನೀಡಿದ್ದಾರೆ ನಟಿ ಮಿಲನಾ ನಾಗರಾಜ್​.

ಲವ್​ ಮಾಕ್ಟೇಲ್​ ತಂಡವೇ ಇಲ್ಲೂ ಮುಂದುವರೆಯಲಿದೆ. ಸಂಗೀತ ನಿರ್ದೇಶಕ ರಘು ದೀಕ್ಷಿತ್​, ಛಾಯಾಗ್ರಾಹಕ-ಸಂಕಲನಕಾರ ಶ್ರೀ ಈ ಚಿತ್ರದಲ್ಲೂ ಮುಂದುವರೆಯಲಿದ್ದಾರೆ. ಇನ್ನು ಈ ಹೊಸ ಚಿತ್ರದಲ್ಲಿ ಕೃಷ್ಣ ಅಲ್ಲದೆ ಬೇರೆ ಯಾವ ಕಲಾವಿದರು ಹೊಸದಾಗಿ ಸೇರಿಕೊಳ್ಳಲಿದ್ದಾರೆ ಎಂಬ ಕುತೂಹಲ ಎಲ್ಲರಿಗೂ ಇದೆ. ಕೃಷ್ಣ ಮತ್ತು ಮಿಲನಾ ಅವರೇ ನಿರ್ಮಾಪಕರಾಗಿದ್ದಾರೆ.

- Advertisement -
spot_img

Latest News

error: Content is protected !!