Sunday, June 7, 2026
Homeಕರಾವಳಿನಿಶ್ಚಿತಾರ್ಥವಾಗಿದ್ದ ಯುವತಿಯ ಲವ್ ಜಿಹಾದ್ ಪ್ರಕರಣ: ಪೊಲೀಸ್ ಬಂಧನದಲ್ಲಿ ನವವಿವಾಹಿತರು!

ನಿಶ್ಚಿತಾರ್ಥವಾಗಿದ್ದ ಯುವತಿಯ ಲವ್ ಜಿಹಾದ್ ಪ್ರಕರಣ: ಪೊಲೀಸ್ ಬಂಧನದಲ್ಲಿ ನವವಿವಾಹಿತರು!

- Advertisement -
- Advertisement -

ಮಂಗಳೂರು: ಇತ್ತೀಚಿಗೆ ಮಂಗಳೂರಿನಲ್ಲಿ ನಡೆದ ಲವ್ ಜಿಹಾದ್​ ಪ್ರಕರಣದಲ್ಲಿ ಮದುವೆಯಾಗಿರುವ ದಂಪತಿಯನ್ನು ಪೊಲೀಸರು ಬಂಧಿಸಿದ್ದು ವಿಚಾರಣೆಗೊಳಪಡಿಸಿದ್ದಾರೆ.

ನವ ವಿವಾಹಿತ ರೇಷ್ಮಾ ಹಾಗೂ ಅಕ್ಬರ್ ಬಂಧಿತ ಆರೋಪಿಗಳು. ಮಂಗಳೂರಿನ ಬರ್ಕೆ ಠಾಣೆಯಲ್ಲಿ ಯಶೋಧಾ,ನಿಶ್ಚಿತಾರ್ಥವಾಗಿದ್ದ ಯುವಕ ಹಾಕಿದ್ದ ಚಿನ್ನಾಭರಣ ಮತ್ತು ತಾನು ಕಷ್ಟಪಟ್ಟು ದುಡಿದು ಕೂಡಿಟ್ಟ ಹಣವನ್ನು ಕದ್ದು ಪರಾರಿಯಾಗಿದ್ದಾಳೆ ಎಂದು ಮಗಳ ವಿರುದ್ಧವೇ ದೂರು ನೀಡಿದ್ದರು.

ಈ ಹಿನ್ನಲೆಯಲ್ಲಿ ಬರ್ಕೆ ಠಾಣೆಗೆ ಮದುವೆಯಾಗಿ ರೇಷ್ಮಾ-ಅಕ್ಬರ್ ಬಂದಿದ್ದಾರೆ. ಗದಗದಲ್ಲಿ ಇಬರಿಬ್ಬರ ವಿವಾಹವಾಗಿದ್ದು, ಈ ಮದುವೆಗೆ ಯಶೋಧಾ ಅಣ್ಣನ ನೇತೃತ್ವ ಇತ್ತು ಎಂದು ಕೂಡ ಹೇಳಲಾಗಿದೆ. ಬರ್ಕೆ ಠಾಣೆಗೆ ಆಗಮಿಸಿದ ಜೋಡಿಯನ್ನು ಪೊಲೀಸರು ಕಳ್ಳತನದ ಆರೋಪದಡಿ ಬಂಧನ ಮಾಡಿದ್ದಾರೆ.

ಮಂಗಳೂರಿನಲ್ಲಿ ತೀವ್ರ ಕುತೂಹಲ ಕೆರಳಿಸಿದ್ದ ತವರು ಮನೆಯ 22 ವರ್ಷಗಳ ಪ್ರತಿಕಾರದ ಪ್ರೇಮ ಕಥೆ ಪ್ರಕರಣ ತಾರ್ಕಿಕ ಅಂತ್ಯ ಕಂಡಿದೆ. ನಿಶ್ಚಿತಾರ್ಥವಾಗಿದ್ದ ಎಂಎಸ್ಸಿ ಪಧವೀಧರೆ ಯುವತಿ, ಎರಡೇ ದಿನದಲ್ಲಿ ಹಣ ಮತ್ತು ಒಡವೆಯೊಂದಿಗೆ ನಾಪತ್ತೆಯಾಗಿದ್ದು, ಇದೀಗ ಅಣ್ಣನ ನಾಗಬೇಕಾದವನನ್ನು ಮದುವೆಯಾಗಿ ಮತ್ತೆ ತಾಯಿ ಮನೆಗೆ ಬಂದಿದ್ದಳು.ಮಂಗಳೂರಿನ ಸೆಂಟ್ರಲ್ ವೇರ್ ಹೌಸ್ ಬಳಿಕ ಅಪಾರ್ಟ್ಮೆಂಟ್ ಒಂದರಲ್ಲಿ ಸೆಕ್ಯೂರಿಟಿಯಾಗಿರುವ ಗದಗ ಮೂಲದ ಮಹಿಳೆ ಯಶೋಧಾ ಎಂಬುವವರ ಮಗಳು ರೇಷ್ಮಾ, ತನ್ನ ತಾಯಿಯ ಸ್ವಂತ ಅಕ್ಕನ ಮಗನನ್ನೇ ಮದುವೆಯಾಗಿ ಈಗ ಪೊಲೀಸ್ ಠಾಣೆಗೆ ಹಾಜರಾಗಿ ಕಳ್ಳತನದ ಆರೋಪದಲ್ಲಿ ಬಂಧಿಯಾಗಿದ್ದಾಳೆ.

- Advertisement -

Latest News

error: Content is protected !!