Thursday, June 4, 2026
Homeಕರಾವಳಿಉಡುಪಿಉಡುಪಿಯಲ್ಲಿ ಪ್ರೇಮ ವೈಫಲ್ಯದಿಂದ ನೊಂದು ಯುವಕ ಆತ್ಮಹತ್ಯೆ

ಉಡುಪಿಯಲ್ಲಿ ಪ್ರೇಮ ವೈಫಲ್ಯದಿಂದ ನೊಂದು ಯುವಕ ಆತ್ಮಹತ್ಯೆ

- Advertisement -
- Advertisement -

ಉಡುಪಿ: ಪ್ರೇಮ ವೈಫಲ್ಯದಿಂದ ಮನನೊಂದು ಯುವಕನೋರ್ವ ಆತ್ಮಹತ್ಯೆ ಮಾಡಿಕೊಂಡ ಘಟನೆ ಉಡುಪಿಯ ಶಿರೂರು ಗ್ರಾಮದ ದಾಸನಾಡಿ ಎಂಬಲ್ಲಿ ನಡೆದಿದೆ.

ದಾಸವಾಡಿಯ ರಜನಿ ಗಾಣಿಗ ಎಂಬವರ ಮಗ ಅಭಿಷೇಕ್ (20) ಮೃತ ಯುವಕ.  ಈತ ಕೋಟೇಶ್ವರ ವರದರಾಜ ಕಾಲೇಜಿನಲ್ಲಿ ದ್ವಿತೀಯ ವರ್ಷದ ಬಿಎಸ್ಸಿ ಓದುತ್ತಿದ್ದು, ಬೈಂದೂರಿನ ಹುಡುಗಿಯೊಬ್ಬಳನ್ನು ಪ್ರೀತಿಸುತ್ತಿದ್ದ ಎನ್ನಲಾಗಿದೆ.

ಈ ವಿಚಾರ ತಿಳಿದು ಹುಡುಗಿಯ ಮಾವ ಇವರ ಮನೆಗೆ ಬಂದು ಇದೆಲ್ಲಾ ಸರಿಯಲ್ಲ ಎಂದು ಬುದ್ದಿ ಮಾತು ಹೇಳಿ ಹೋಗಿದ್ದರು. ಇದರಿಂದ ಮನನೊಂದ ಅಭಿಷೇಕ್ ಮನೆಯ ಕೊಠಡಿಯಲ್ಲಿ ಫ್ಯಾನಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Latest News

error: Content is protected !!