- Advertisement -
- Advertisement -
ಬಂಟ್ವಾಳ: ಕಂಪನಿಗೆ ಸೇರಿದ ಆಪ್ಟಿಕ್ ಫೈಬರ ಕೇಬಲ್ ಅನ್ನು ಈ ಹಿಂದೆ ರಾಪಿಡ್ ಇನ್ಫೋಟೆಕ್ ಎಂಬ ಕಂಪನಿಯಲ್ಲಿ ಕೆಲಸ ಮಾಡಿಕೊಂಡಿದ್ದ ವ್ಯಕ್ತಿ ಕೇಬಲ್ ಅನ್ನು ತುಂಡರಿಸಿರುವ ಘಟನೆ ಬಂಟ್ವಾಳ ತಾಲೂಕು ಅಮಾಡಿ ಗ್ರಾಮದ ಲೊರೊಟ್ಟೂ ಚರ್ಚ್ ಬಳಿ ನಡೆದಿದೆ.
ಆರೋಪಿಗಳನ್ನು ನವೀನ ಪಿಂಟೋ ಹಾಗೂ ಪ್ರೀತಮ್ ಪಿಂಟೋ ಎಂದು ಗುರುತಿಸಲಾಗಿದೆ.
ಸೋರ್ನಾಡು ಬಂಟ್ವಾಳ ನಿವಾಸಿ ವಿರೇಶ ಪಿಂಟೋ ಎಂಬವರು ರಾಪಿಡ್ ಇನ್ಫೋಟೆಕ್ ಎಂಬ ಕಂಪನಿಯಲ್ಲಿ ಈ ಹಿಂದೆ ಕೆಲಸ ಮಾಡಿಕೊಂಡಿದ್ದರು. ಇವರೊಂದಿಗೆ ಪ್ರೀತಮ್ ಪಿಂಟೋ ಕೂಡ ಕೈಜೋಡಿಸಿದ್ದಾರೆ. ಆರೋಪಿಗಳು ಬಂಟ್ವಾಳ ತಾಲೂಕು ಅಮ್ಮಾಡಿ ಗ್ರಾಮದ ಲೊರೊಟ್ಟೋ ಚರ್ಚ ಬಳಿ ಕಂಪನಿಗೆ ಸೇರಿದ 1,50,000/- ರೂ ಬೆಲೆಯ ಆಪ್ಟಿಕ್ ಫೈಬರ ಕೇಬಲ್ ಯನ್ನು ತುಂಡರಿಸಿ ಕಂಪನಿಗೆ ನಷ್ಟ ಉಂಟು ಮಾಡಿರುತ್ತಾರೆ. ಈ ಬಗ್ಗೆ ನೀಡಿದ ದೂರಿನ ಮೇರೆಗೆ ಬಂಟ್ವಾಳ ನಗರ ಠಾಣೆಯಲ್ಲಿ ಅ.ಕ್ರ – 39/2024 ಕಲಂ: 427 ಜೊತೆ 34 ಐಪಿಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.
- Advertisement -