Wednesday, July 15, 2026
Homeಕರಾವಳಿಮಂಗಳೂರು: ಬೈಕ್ ಢಿಕ್ಕಿಯಾಗಿ ರಸ್ತೆಗೆ ಬಿದ್ದ ಮಹಿಳೆಯ ಕೈ ಮೇಲೆ ಹರಿದ ಲಾರಿ

ಮಂಗಳೂರು: ಬೈಕ್ ಢಿಕ್ಕಿಯಾಗಿ ರಸ್ತೆಗೆ ಬಿದ್ದ ಮಹಿಳೆಯ ಕೈ ಮೇಲೆ ಹರಿದ ಲಾರಿ

- Advertisement -
- Advertisement -

ಮಂಗಳೂರು: ಬೈಕ್ ಢಿಕ್ಕಿಯಾಗಿ ರಸ್ತೆಗೆ ಬಿದ್ದಿದ್ದ ಮಹಿಳೆಯ ಕೈ ಮೇಲೆ ಲಾರಿಯೊಂದರ ಚಕ್ರ ಹರಿದ ಘಟನೆ ಮಂಗಳೂರು ನಗರದ ಕೆಪಿಟಿ ಜಂಕ್ಷನ್‌ನಲ್ಲಿ ನಡೆದಿದೆ.


ಮರಿಯಮ್ಮ(47),ಗಾಯಗೊಂಡವರು. ಮುಹಮ್ಮದ್ ಹನೀಫ್ ಅವರು ಕೆಪಿಟಿಯ ಪೆಟ್ರೋಲ್ ಪಂಪ್‌ನಲ್ಲಿ ಬೈಕ್‌ಗೆ ಪೆಟ್ರೋಲ್ ಹಾಕಿಸಿ ವಿಟ್ಲ ಕಡೆಗೆ ಹೋಗಲು ರಾಷ್ಟ್ರೀಯ ಹೆದ್ದಾರಿ ಪ್ರವೇಶಿಸಿದ್ದರು. ಆವಾಗ ವಿರುದ್ಧದಿಕ್ಕಿನಲ್ಲಿ ಬಂದ ಬೈಕೊಂದು ಹನೀಫ್‌ರ ಬೈಕ್‌ಗೆ ಢಿಕ್ಕಿ ಹೊಡೆದಿದೆ.ಇದರಿಂದ – ಬೈಕ್‌ನ ಹಿಂಬದಿ ಕುಳಿತಿದ್ದ ಮರಿಯಮ್ಮರಸ್ತೆಗೆ ಎಸೆಯಲ್ಪಟ್ಟರು.

ಅದೇ ವೇಳೆ ಕೆಪಿಟಿ ಕಡೆಯಿಂದ ನಂತೂರು ಕಡೆಗೆ ಚಲಿಸುತ್ತಿದ್ದ ಲಾರಿಯು ಮರಿಯಮ್ಮರ ಕೈಯ ಮೇಲೆ ಹರಿದು ಹೋಗಿದೆ. ಇದರಿಂದ ಮರಿಯಮ್ಮರಿಗೆ ಕೈಗೆ ಗಾಯವಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.
ಈ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

- Advertisement -

Latest News

error: Content is protected !!