Sunday, May 5, 2024
Homeಕರಾವಳಿಬೆಳ್ತಂಗಡಿ; ಅಪಘಾತ ತಪ್ಪಿಸಲು ಹೋಗಿ ಮನೆಗೆ ನುಗ್ಗಿದ ಲಾರಿ

ಬೆಳ್ತಂಗಡಿ; ಅಪಘಾತ ತಪ್ಪಿಸಲು ಹೋಗಿ ಮನೆಗೆ ನುಗ್ಗಿದ ಲಾರಿ

spot_img
- Advertisement -
- Advertisement -

ಬೆಳ್ತಂಗಡಿ; ಅಪಘಾತ ತಪ್ಪಿಸಲು ಹೋಗಿ ಲಾರಿಯೊಂದು ರಸ್ತೆ ಬದಿಯ ಮನೆಗೆ ನುಗ್ಗಿರುವ ಘಟನೆ ನಿಡಿಗಲ್ ಸಮೀಪ ರಾಷ್ಟ್ರೀಯ ಹೆದ್ದಾರಿಯಲ್ಲಿ ಮಂಗಳವಾರ ನಡೆದಿದೆ.

ಅತಿಯಾದ ವೇಗದಲ್ಲಿ ಬಂದ ಬಸ್ ಲಾರಿಯನ್ನು ಓವರ್ ಟೇಕ್ ಮಾಡಿದೆ. ಈ ಸಂದರ್ಭದಲ್ಲಿ ಅಪಘಾತ ತಪ್ಪಿಸಲು ಲಾರಿ ಚಾಲಕ ವಾಹನವನ್ನು ರಸ್ತೆ ಬದಿಗೆ ತಂದಿದ್ದಾನೆ. ಮರದ ದಿಮ್ಮಿಗಳು ತುಂಬಿದ್ದ ಲಾರಿ ನಿಯಂತ್ರಣ ಕಳೆದುಕೊಂಡು ರಸ್ತೆ ಬದಿಯಲ್ಲಿದ್ದ ಹಳೆ ಮನೆಗೆ ನುಗ್ಗಿದ್ದು , ಮನೆಯ ಮೇಲ್ಛಾವಣಿ ಕುಸಿದಿದೆ.

ಮನೆಯಲ್ಲಿ ಯಾರೂ ವಾಸವಿಲ್ಲದ ಕಾರಣ ಯಾರಿಗೂ ಯಾವುದೇ ಅಪಾಯ ಸಂಭವಿಸಿಲ್ಲ. ಲಾರಿ ಜಖಂಗೊಂಡಿದೆ. ಬಸ್ ಚಾಲಕ ನಿಲ್ಲಿಸದೆ ಪರಾರಿಯಾಗಿದ್ದಾನೆ.

ವಿದ್ಯಾರ್ಥಿಗಳು ಬಸ್ ಕಾಯುವ ಜಾಗ ಇದಾಗಿದ್ದು ಘಟನೆಗಿಂತ ಕೆಲ ಹೊತ್ತು ಮೊದಲು ಇಲ್ಲಿ ವಿದ್ಯಾರ್ಥಿಗಳು ಬಸ್ ಕಾಯುತ್ತಿದ್ದರು. ವಿದ್ಯಾರ್ಥಿಗಳು ಅಲ್ಲಿಂದ ತೆರಳಿದ ಬಳಿಕ ಘಟನೆ ಸಂಭವಿಸಿದ್ದು ದೊಡ್ಡ ಅಪಾಯ ತಪ್ಪಿದಂತಾಗಿದೆ.

- Advertisement -
spot_img

Latest News

error: Content is protected !!