Thursday, June 20, 2024
Homeಕರಾವಳಿಮಂಗಳೂರುಬೆಳ್ತಂಗಡಿ : ಲೋಕಾಯುಕ್ತ ಜನ  ಸಂಪರ್ಕ ಸಭೆ;ಒಟ್ಟು 17 ದೂರು ಅರ್ಜಿ ಸ್ವೀಕರಿಸಿದ ಲೋಕಾಯುಕ್ತ ಅಧಿಕಾರಿಗಳು

ಬೆಳ್ತಂಗಡಿ : ಲೋಕಾಯುಕ್ತ ಜನ  ಸಂಪರ್ಕ ಸಭೆ;ಒಟ್ಟು 17 ದೂರು ಅರ್ಜಿ ಸ್ವೀಕರಿಸಿದ ಲೋಕಾಯುಕ್ತ ಅಧಿಕಾರಿಗಳು

spot_img
- Advertisement -
- Advertisement -

ಬೆಳ್ತಂಗಡಿ : ದಕ್ಷಿಣ ಕನ್ನಡ ಲೋಕಾಯುಕ್ತ ಪೊಲೀಸರು ಬೆಳ್ತಂಗಡಿ ಆಡಳಿತ ಸೌಧದಲ್ಲಿ ಜೂ.12 ರಂದು ನಡೆಸಿದ ‘ಲೋಕಾಯುಕ್ತ ಜನ ಸಂಪರ್ಕ ಸಭೆ’ ಯಲ್ಲಿ ಒಟ್ಟು 17 ದೂರು ಅರ್ಜಿ ಲೋಕಾಯುಕ್ತ ಪೊಲೀಸರಿಗೆ  ಬಂದಿದ್ದು ಅದರಲ್ಲಿ 16 ದೂರು ಬೆಳ್ತಂಗಡಿ ಕಂದಾಯ ಇಲಾಖೆಗೆ ಸಂಬಂಧಿಸಿದ ದೂರು ಅರ್ಜಿಯಾಗಿದೆ. ಹಾಗೂ 1 ದೂರು ಅರ್ಜಿ ಬೆಳ್ತಂಗಡಿ PWD ಇಲಾಖೆಗೆ ಸಂಬಂಧಿಸಿದಾಗಿದೆ.

ಒಟ್ಟು 6 ದೂರು ಅರ್ಜಿಯ ಬಗ್ಗೆ  ಲೋಕಾಯುಕ್ತ ಅಧಿಕಾರಿಗಳು ಸ್ಥಳದಲ್ಲಿಯೇ ಕಂದಾಯ ಇಲಾಖೆಯ ಅಧಿಕಾರಿಗಳನ್ನು ಕರೆಸಿ ಸಮಸ್ಯೆಗಳನ್ನು ಪರಿಹಾರ ಮಾಡಿಸಿದ್ದಾರೆ. ಇನ್ನೂ 11 ದೂರು ಅರ್ಜಿ ಲೋಕಾಯುಕ್ತ ಅಧಿಕಾರಿಗಳ ಕೈಯಲ್ಲಿದ್ದು‌. ಮುಂದಿನ ದಿನಗಳಲ್ಲಿ ಪ್ರಕರಣದ ಬಗ್ಗೆ ತನಿಖೆ ನಡೆಸಿ ಜನರ ಸಮಸ್ಯೆ ಪರಿಹಾರ ಮಾಡಲಾಗುತ್ತದೆ ಎಂದು ಲೋಕಾಯುಕ್ತ ಪೊಲೀಸರು ತಿಳಿಸಿದ್ದಾರೆ.

ದ.ಕ.ಲೋಕಾಯುಕ್ತ ಎಸ್.ಪಿ ನಟರಾಜ್, ಇನ್ಸ್ಪೆಕ್ಟರ್ ಚಂದ್ರಶೇಖರ.ಸಿ.ಎಲ್, ಚಂದ್ರಶೇಖರ.ಕೆ.ಎನ್, ಅಮಾನುಲ್ಲಾ ಹಾಗೂ ಸಿಬ್ಬಂದಿ ವಿನಾಯಕ್, ಮಹೇಶ್, ಪಾಪಣ್ಣ ‘ಬೆಳ್ತಂಗಡಿ ಜನ ಸಂಪರ್ಕ ಸಭೆ’ಯಲ್ಲಿ ಭಾಗವಹಿಸಿದರು

- Advertisement -
spot_img

Latest News

error: Content is protected !!