Thursday, July 10, 2025
Homeಕರಾವಳಿಮಂಗಳೂರುಮಂಗಳೂರು : ಲಂಚ ಸ್ವೀಕರಿಸುತ್ತಿದ್ದಾಗ ಲೋಕಾ ಬಲೆಗೆ ಬಿದ್ದ ಕದ್ರಿ ಟ್ರಾಫಿಕ್ ಹೆಡ್ ಕಾನ್ಟೇಬಲ್

ಮಂಗಳೂರು : ಲಂಚ ಸ್ವೀಕರಿಸುತ್ತಿದ್ದಾಗ ಲೋಕಾ ಬಲೆಗೆ ಬಿದ್ದ ಕದ್ರಿ ಟ್ರಾಫಿಕ್ ಹೆಡ್ ಕಾನ್ಟೇಬಲ್

spot_img
- Advertisement -
- Advertisement -

ಮಂಗಳೂರು : ಕಾರು ಮತ್ತು ಸ್ಕೂಟರ್ ಮಧ್ಯೆ ನಂತೂರು ಸರ್ಕಲ್‌ ನಲ್ಲಿ ಎಕ್ಸಿಡೆಂಟ್ ಆಗಿದ್ದು. ಈ ಘಟನೆ ಬಗ್ಗೆ ಕದ್ರಿ ಟ್ರಾಫಿಕ್ ಪೊಲೀಸ್ ಠಾಣಿಯಲ್ಲಿ ಪ್ರಕರಣ ದಾಖಲಾಗಿರುತ್ತದೆ. ಕದ್ರಿ ಟ್ರಾಫಿಕ್ ಪೊಲೀಸ್ ಠಾಣಿಯ ಸಿಬ್ಬಂದಿ ತಸ್ಲಿಂ ರವರು ಕಾರು, ಕಾರಿನ ದಾಖಲಾತಿಗಳನ್ನು ಪೊಲೀಸ್ ಠಾಣೆಗೆ ತಂದು ಕೊಡುವಂತೆ ತಿಳಿಸಿದಂತೆ ದೂರುದಾರ ಕಾರು ಮತ್ತು ಕಾರಿನ ದಾಖಲಾತಿಗಳನ್ನು ಪೊಲೀಸ್ ಠಾಣಿಗೆ ನೀಡಿರುತ್ತಾರೆ.

ಈ ಬಗ್ಗೆ ದೂರುದಾರ ತನ್ನ ಬಾಬ್ತು ಕಾರನ್ನು ಪೊಲೀಸ್ ಠಾಣೆಯಿಂದ ಬಿಡಿಸಿಕೊಡಲು ಕದ್ರಿ ಟ್ರಾಫಿಕ್ ಪೊಲೀಸ್ ಠಾಣೆಯ ಸಿಬ್ಬಂದಿ ತಸ್ಲಿಂ ರವರು ರೂ 50 ಸಾವಿರ ಲಂಚದ ಹಣಕ್ಕೆ ಬೇಡಿಕೆ ಬಿಟ್ಟಿರುತ್ತಾರೆ. ನಂತರ ದೂರುದಾರರು ತನ್ನ ವಕೀಲರಲ್ಲಿ ವಿಷಯವನ್ನು ತಿಳಿಸಿ ವಕೀಲರು ಠಾಣೆಗೆ ನೀಡಿ ದೂರುದಾರರ ಕಾರನ್ನು ಬಿಟ್ಟುಕೊಡುವಂತೆ ಕೇಳಿಕೊಂಡಾಗ ದೂರುದಾರರು ಕಾರನ್ನು ಸ್ವೀಕರಿಸಿರುತ್ತಾರೆ ಎಂದು ಸಹಿ ಪಡೆದುಕೊಂಡು ಕಾರನ್ನು ಪೊಲೀಸ್ ಠಾಣೆಯಿಂದ ಬಿಟ್ಟುಕೊಟ್ಟಿರುವುದಿಲ್ಲ. ನಂತರ ತಸ್ಲಿಂ ರವರು ಕಾರನ್ನು ದೂರುದಾರರಿಗೆ ಬಿಟ್ಟುಕೊಡಲು ದೂರುದಾರರ ಮೊಬೈಲ್ ಫೋನ್ ಬಲವಂತದಿಂದ ಪಡೆದುಕೊಂಡು ಕಾರನ್ನು ಬಿಟ್ಟು ಕಳುಹಿಸಿರುತ್ತಾರೆ.

ನಂತರ ದೂರುದಾರರು ತನ್ನ ಮೊಬೈಲ್ ಪೋನ್ ಅನ್ನು ತನಗೆ ವಾಪಾಸ್ಸು ಕೊಡಲು ತಸ್ಲಿಂ ರವರಲ್ಲಿ ಕೇಳಿಕೊಂಡಾಗ ರೂ 50 ಸಾವಿರ ಲಂಚದ ಹಣಕ್ಕೆ ಬೇಡಿಕೆ ಇಟ್ಟು ಮೊಬೈಲ್ ಪೋನ್ ಅನ್ನು ಹಿಂತಿರುಗಿಸಬೇಕಾದರೆ ಓರಿಜಿನಲ್ ಲೈಸನ್ಸ್ ಅನ್ನು ಠಾಣಿಗೆ ತಂದುಕೊಡುವಂತೆ ತಿಳಿಸಿರುತ್ತಾರೆ. ನಂತರ ದೂರುದಾರರು ಓರಿಜಿನಲ್ ಲೈಸನ್ಸ್ ಅನ್ನು ನೀಡಿರುತ್ತಾರೆ.

ತಸ್ಲಿಂ ರವರು ಠಾಣೆಯ ಮತ್ತೋರ್ವ ಸಿಬ್ಬಂದಿ ವಿನೋದ್ ರವರ ಮುಖಾಂತರ ರೂ 30 ಸಾವಿರ ಲಂಚದ ಹಣ ಕೊಟ್ಟು ಓರಿಜಿನಲ್ ಲೈಸನ್ಸ್ ಪಡೆದುಕೊಂಡು ಹೋಗಲು ತಿಳಿಸಿದ್ದು, ದೂರುದಾರರು ಜುಲೈ 9 ರಂದು ಕದ್ರಿ ಟ್ರಾಪಿಕ್ ಪೊಲೀಸ್ ಠಾಣೆಗೆ ಹೋಗಿ ತಸ್ಲಿಂ ರವರನ್ನು ಬೇಟಿ ಮಾಡಿ ಮಾತನಾಡಿದಾಗ ಓರಿಜನಲ್ ಲೈಸನ್ಸ್ ನೀಡಲು ತಸ್ಲಿಂ ರವರು ರೂ 10 ಸಾವಿರ ಹಣವನ್ನು ನೀಡುವಂತೆ ತಿಳಿಸಿರುತ್ತಾರೆ. ಈ ಬಗ್ಗೆ ದೂರುದಾರರು ತನ್ನಲ್ಲಿ ರೂ 500 ಇದೆ ಎಂದಾಗ ರೂ 5 ಸಾವಿರ ಇಲ್ಲದೇ ಠಾಣೆ ಕಡೆಗೆ ಬರಬೇಡ ಎಂದು ಬೈದು ಕಳುಹಿಸಿರುತ್ತಾರೆ.
ದೂರುದಾರರು ಕಡಿಮೆ ಮಾಡಿ ಎಂದಾಗ ಓರಿಜಿನಲ್ ಲೈಸನ್ಸ್ ನೀಡಲು ರೂ 5 ಸಾವಿರ ಲಂಚದ ಹಣಕ್ಕೆ ಬೇಡಿಕೆ ಇಟ್ಟಿರುತ್ತಾರೆ. ದೂರುದಾರರಿಗೆ ಕಾನೂನು ಬದ್ದವಾಗಿ ಮಾಡಬೇಕಾದ ಸರ್ಕಾರಿ ಕೆಲಸಕ್ಕೆ ಲಂಚ ನೀಡಿ ಕೆಲಸ ಮಾಡಿಸಿಕೊಳ್ಳಲು ಇಚ್ಛೆ ಇಲ್ಲದ ಕಾರಣ ಮಂಗಳೂರು ಲೋಕಾಯುಕ್ತ ಪೊಲೀಸ್ ಠಾಣೆಗೆ ದೂರು ನೀಡಿರುತ್ತಾರೆ.ಈ ಬಗ್ಗೆ ಮಂಗಳೂರು ಲೋಕಾಯುಕ್ತ ಪೊಲೀಸ್ ಠಾಣಿಯಲ್ಲಿ ಕದ್ರಿ ಟ್ರಾಪಿಕ್ ಪೊಲೀಸ್ ಠಾಣೆಯ ಸಿಬ್ಬಂದಿ ತಸ್ಲಿಂ(45) ರವರ ಮತ್ತು ವಿನೋದ್ ರವರ ವಿರುದ್ದ ಪ್ರಕರಣ ದಾಖಲಾಗಿರುತ್ತದೆ.

ಈ ದಿನ ಜುಲೈ 10 ರಂದು ಕದ್ರಿ ಟ್ರಾಫಿಕ್ ಪೊಲೀಸ್ ಠಾಣಿಯ ಸಿಬ್ಬಂದಿ ತಸ್ಲಿಂ(45) ರವರು ದೂರುದಾರರಿಂದ ರೂ. 5 ಸಾವಿರ ಲಂಚದ ಹಣವನ್ನು ಸ್ವೀಕರಿಸುವಾಗ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿರುತ್ತಾರೆ. ಆರೋಪಿ ತಸ್ಲಿಂ ‌ನನ್ನು ವಶಕ್ಕೆ ಪಡೆದು ತನಿಖೆ ನಡೆಸಲಾಗುತ್ತಿದೆ.

ಮಂಗಳೂರು ಲೋಕಾಯುಕ್ತ ವಿಭಾಗದ ಅಧೀಕ್ಷಕ (ಪ್ರಭಾರ) ಕುಮಾರಚಂದ್ರ, ಡಿವೈಎಸ್ಪಿ ಸುರೇಶ್ ಕುಮಾ‌ರ್.ಪಿ ಮತ್ತು ಡಾ.ಗಾನ.ಪಿ.ಕುಮಾರ್, ಇನ್ಸೆಕ್ಟರ್ ಭಾರತಿ.ಪಿ ಮತ್ತು ಚಂದ್ರಶೇಖ‌ರ್ ಕೆ.ಎನ್ ಹಾಗೂ ಸಿಬ್ಬಂದಿ ರಾಧಾಕೃಷ್ಣ.ಡಿ.ಎ, ವೈಶಾಲಿ, ಅದರ್ಶ್, ಮಹೇಶ್, ಯತೀಶ್‌, ರಾಜಶೇಖ‌ರ್, ದುಂಡಪ್ಪ,ಗಂಗಣ್ಣ, ನಾಗಪ್ಪ, ವಿವೇಕ್.ವಿ.ಎನ್, ಪ್ರವೀಣ್‌ ಹೊಸಮಣಿ, ರಾಜಪ್ಪ ಗೋಟಿ, ಸುರೇಂದ್ರ, ಗಾಯತ್ರಿ, ಬಾಲರಾಜ್, ರುದ್ರೇಗೌಡ,ನವೀನ್ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು.

- Advertisement -
spot_img

Latest News

error: Content is protected !!