Thursday, January 23, 2025
Homeಇತರಲಾಕ್‌ಡೌನ್ ಉಲ್ಲಂಘನೆ: ಪ್ರೇಮಿಗಳಿಬ್ಬರು ಪರಾರಿ

ಲಾಕ್‌ಡೌನ್ ಉಲ್ಲಂಘನೆ: ಪ್ರೇಮಿಗಳಿಬ್ಬರು ಪರಾರಿ

spot_img
- Advertisement -
- Advertisement -

ಒಂದೆಡೆ ಕೊರೊನಾ ಭೀತಿಯಿಂದ ಇಡೀ ದೇಶವೇ ಆತಂಕದಲ್ಲಿದೆ. ಇದರ ನಡುವೆಯೇ ಇಬ್ಬರು ಪ್ರೇಮಿಗಳು ಓಡಿ ಹೋಗಿರುವ ಘಟನೆ ಕೇರಳದ ಕೊಳಿಕ್ಕೊಡ್‌ನಲ್ಲಿ ನಡೆದಿದೆ. ಲಾಕ್‌ಡೌನ್ ಉಲ್ಲಂಘನೆ ಮಾಡಿರುವುದರಿಂದ ಅವರ ವಿರುದ್ಧ ದೂರು ದಾಖಲಾಗಿದೆ.
ಅವರಿಬ್ಬರಿಗೂ ಒಟ್ಟಿಗೆ ಇರಲು ನ್ಯಾಯಾಲಯ ಅನುಮತಿ ನೀಡಿದೆ.21 ವರ್ಷದ ಹುಡುಗಿ ತನ್ನ 23 ವರ್ಷದ ಪ್ರೇಮಿಯೊಂದಿಗೆ ಓಡಿಹೋಗಿದ್ದಾಳೆ. ಪ್ರೇಮಿಗಳಿಬ್ಬರು ಅನೇಕ ವರ್ಷಗಳಿಂದ ಪ್ರೀತಿಸುತ್ತಿದ್ದರು.

ಇಬ್ಬರ ಜಾತಿ ಬೇರೆಯಾಗಿರುವುದರಿಂದ ಹುಡುಗಿಯ ಕುಟುಂಬದವರು ಮದುವೆಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಹೀಗಾಗಿ ಪ್ರೇಮಿಗಳಿಬ್ಬರು ಲಾಕ್‌ಡೌನ್ ನಡುವೆಯೇ ಓಡಿ ಹೋಗಿದ್ದಾರೆ.

ಇತ್ತ ಹುಡುಗಿಯ ತಂದೆ ಮಗಳು ನಾಪತ್ತೆಯಾದ ದೂರು ದಾಖಲಿಸಿದ್ದರು. ಪೊಲೀಸರು ಇಬ್ಬರನ್ನು ಪತ್ತೆ ಮಾಡಿ ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಿದ್ದಾರೆ. ಈ ವೇಳೆ ಇಬ್ಬರು ಮೇಜರ್ ಆಗಿದ್ದರಿಂದ ಪ್ರೇಮಿಗಳಿಗೆ ಹೋಗಲು ಅವಕಾಶ ನೀಡಲಾಗಿದೆ. ಅಲ್ಲದೇ ಹುಡಗಿ ತನ್ನ ಸ್ವಂತ ಇಚ್ಛೆಯಂತೆ ತನ್ನ ಗೆಳೆಯನೊಂದಿಗೆ ಹೋಗಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.

ನ್ಯಾಯಾಲಯದ ಆದೇಶದ ಮೇರೆಗೆ ಪ್ರೇಮಿಗಳು ನಿಯಮ ಉಲ್ಲಂಘಿಸಿದ್ದಕ್ಕಾಗಿ ಪೊಲೀಸರು ಅವರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಕೊವಿಡ್ -19 ತಡೆಯುವ ಹಿನ್ನೆಲೆಯಲ್ಲಿ ಇಡೀ ದೇಶವನ್ನೇ ಲಾಕ್‌ಡೌನ್ ಮಾಡಲಾಗಿದೆ.

- Advertisement -
spot_img

Latest News

error: Content is protected !!