Monday, April 29, 2024
Homeತಾಜಾ ಸುದ್ದಿಇನ್ನು ಒಂದು ತಿಂಗಳು ಲಾಕ್ಡೌನ್ ವಿಸ್ತರಣೆ, ಜುಲೈ ಅಂತ್ಯದವರೆಗೆ ಶಾಲಾ - ಕಾಲೇಜುಗಳಿಗೆ ರಜೆ

ಇನ್ನು ಒಂದು ತಿಂಗಳು ಲಾಕ್ಡೌನ್ ವಿಸ್ತರಣೆ, ಜುಲೈ ಅಂತ್ಯದವರೆಗೆ ಶಾಲಾ – ಕಾಲೇಜುಗಳಿಗೆ ರಜೆ

spot_img
- Advertisement -
- Advertisement -

ಕೊಲ್ಕತ್ತಾ: ಕೊರೋನಾ ವೈರಸ್ ನಿರಂತರವಾಗಿ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ರಾಜ್ಯದಲ್ಲಿ ಲಾಕ್ ಡೌನ್ ನ್ನು ಜು.31 ವರೆಗೆ ವಿಸ್ತರಿಸಿದ್ದಾರೆ.

ಜೂ.24 ರಂದು ಮಮತಾ ಬ್ಯಾನರ್ಜಿ ಈ ಘೋಷಣೆ ಮಾಡಿದ್ದು, ಈಗಾಗಲೇ ಜಾರಿಯಲ್ಲಿರುವ ಲಾಕ್ ಡೌನ್ ಜೂ.30ಕ್ಕೆ ಮುಕ್ತಾಯಗೊಳ್ಳಲಿದೆ. ಪಶ್ಚಿಮ ಬಂಗಾಳದಲ್ಲಿ ಸರ್ವಪಕ್ಷ ಸಭೆಯ ಬಳಿಕ ಮಮತಾ ಬ್ಯಾನರ್ಜಿ ಈ ಘೋಷಣೆ ಮಾಡಿದ್ದಾರೆ.

ಅಲ್ಲದೇ ಜುಲೈ ಅಂತ್ಯದವರೆಗೆ ಶಾಲಾ-ಕಾಲೇಜುಗಳು ಆರಂಭವಾಗುವುದಿಲ್ಲ ಎಂದು ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ತಿಳಿಸಿದ್ದಾರೆ.

ಪಶ್ಚಿಮ ಬಂಗಾಳ ರಾಜ್ಯದಲ್ಲಿ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ 14,728. 580 ಜನರು ಇದುವರೆಗೂ ಸೋಂಕಿಗೆ ಬಲಿಯಾಗಿದ್ದಾರೆ. ರಾಜ್ಯದಲ್ಲಿರುವ ಸಕ್ರಿಯ ಪ್ರಕರಣಗಳ ಸಂಖ್ಯೆ 9,218.

- Advertisement -
spot_img

Latest News

error: Content is protected !!